ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು.  
ಜಿಲ್ಲೆ

ಬಿಲ್ಲವ ಟ್ರೋಫಿ ಕ್ರಿಕೆಟ್ ಪಂದ್ಯ

Karthika K.S

ಬ್ರಹ್ಮಾವರ: ಬ್ರಹ್ಮಾವರದಲ್ಲಿ ಪ್ರಥಮವಾಗಿ ಬಿಲ್ಲವರಿಗಾಗಿ ಬಿಲ್ಲವರಿಂದ ನೀಲಾವರ ಮಟಪಾಡಿ ಬಿಲ್ಲವ ಫ್ರೆಂಡ್ಸ್ ವತಿಯಿಂದ 6 ತಂಡಗಳ ಕ್ರಿಕೆಟ್ ಪಂದ್ಯ ‘ಮಟಪಾಡಿ ಬಿಲ್ಲವ ಟ್ರೋಫಿ- 2025’ ಭಾನುವಾರ ಚಾಂತಾರು ಗ್ಲೋಬಲ್ ಗ್ರೌಂಡ್‌ನಲ್ಲಿ ಜರುಗಿತು.

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಪಂದ್ಯಕ್ಕೆ ಚಾಲನೆ ನೀಡಿದರು. ಪಂದ್ಯದಲ್ಲಿ ಜತ್ತನ್ ಪೂಜಾರಿ ಫ್ರೆಂಡ್ಸ್ ಪ್ರಥಮ, ಕೋಟಿ ಚೆನ್ನಯ್ಯ ಬ್ರದರ್ಸ್‌ ಚಾಂತಾರು ದ್ವಿತೀಯ ಬಹುಮಾನ ಪಡೆಯಿತು. ಬಹಮಾನ ವಿತರಣಾ ಕಾರ್ಯಕ್ರಮದಲ್ಲಿ ವೀಕ್ಷಕ ವಿವರಣೆ ನೀಡಿದ ಚೇತನ್ ಪೂಜಾರಿ ಮತ್ತು ಕ್ರೀಡಾ ಸಾಧಕ ಸುಹಾನ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ, ಸತೀಶ್, ಸತೀಶ್ ಪೂಜಾರಿ, ಉಗ್ಗೆಲ್‌ಬೆಟ್ಟು ಅಶೋಕ್ ಪೂಜಾರಿ, ಸುರೇಶ್ ಎನ್.ಕರ್ಕೇರ, ದೀಪಕ್ ಪೂಜಾರಿ, ಮುದ್ದು ಜತ್ತನ್ನ ಉಪಸ್ಥಿತರಿದ್ದರು.