ಉಡುಪಿ: ಬನ್ನಂಜೆ ಬ್ರಹ್ಮಶ್ರೀ ನಾರಾಯಣಗುಗಳ ಮಂದಿರದಲ್ಲಿ ನಿತ್ಯ ಪೂಜಾದಿ ಕಾರ್ಯಗಳು ನಡೆಯುತ್ತಿದ್ದು, ಜ.22ರಂದು ಬೆಳಗ್ಗೆ ಶ್ರೀರಾಮ ದೇವರ ಪ್ರತಿಷ್ಠೆ ದಿನ ಮಂದಿರದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಬಗ್ಗೆ ಪೂರ್ವಾಗ್ರಹ ಪೀಡಿತ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸೇವಾ ಸಂಘ ವಿರುದ್ಧ ಅವಾಚ್ಯ ನಿಂದನೆ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದು, ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸಂಘ ಅಧ್ಯಕ್ಷ ಮಾಧವ ಬನ್ನಂಜೆ ಆಗ್ರಹಿಸಿದರು.
ಬಿಲ್ಲವ ಸೇವಾ ಸಂಘ ವಿರುದ್ಧ ಅವಾಚ್ಯ ನಿಂದನೆ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಡಾ. ಕೆ. ಅರುಣ್, ವಿಡಿಯೋ ಪರಿಶೀಲನೆ ನಡೆಸಲಾಗುವುದು. ಸಂಘಟನೆ ಅಥವಾ ವ್ಯಕ್ತಿಗತ ಆರೋಪವಿದ್ದರೆ ಮಾನನಷ್ಟ ಮೊಕದ್ದಮೆ ಹೂಡಹುದು. ಸಾಮಾಜಿಕ ಸಾಮರಸ್ಯ ಹದಗೆಡಿಸುವ ಅಂಶಗಳಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂದ ಕಾರ್ಯದರ್ಶಿ ಶಶಿಧರ ಅಮೀನ್, ಪ್ರಮುಖರಾದ ಆನಂದ ಪೂಜಾರಿ, ಪ್ರವಿಣ್ ಸುವರ್ಣ, ಗಿರಿರಾಜ್, ಗ್ರಾಪಂ ಸದಸ್ಯ ಲಕ್ಷ$್ಮಣ ಅಂಬಲಪಾಡಿ, ಉದಯ ಪೂಜಾರಿ, ಪೂರ್ಣಿಮಾ ಅಂಚನ್, ರಾವೇಂದ್ರ ಅಮೀನ್, ಗಣೇಶ್ ಗುಂಡಿಬೈಲು ಉಪಸ್ಥಿತರಿದ್ದರು.