ಗೊಳಸಂಗಿ ಸಮೀಪದ ಬೀರಲದಿನ್ನಿ ಗ್ರಾಪಂ ವ್ಯಾಪ್ತಿಯ ಅಂಗಡಗೇರಿ ಗ್ರಾಮದಲ್ಲಿ ಮಂಗಳವಾರ ನಡೆದ ವಾರ್ಡ್​ ಸಭೆಯನ್ನುದ್ದೇಶಿಸಿ ಪಿಡಿಒ ಎಂ.ಎನ್​.ಬಿಷ್ಟಗೊಂಡ ಮಾತನಾಡಿದರು. ಕಾರ್ಯದರ್ಶಿ ಶೇಖರ ಪವಾರ, ಗ್ರಾಪಂ ಸದಸ್ಯರಾದ ಪರಮಣ್ಣ ಹಡ್ಲಗೇರಿ, ಶರಣಪ್ಪ ಮಾದರ, ಮುದಕಮ್ಮ ಕೂಡಗಿ ಮತ್ತಿತರರು ಇದ್ದರು. 
ಜಿಲ್ಲೆ

ಕರ ವಸೂಲಾತಿಯೇ ಸಿಬ್ಬಂದಿಗೆ ಜೀವಾಳ

ಗೊಳಸಂಗಿ: ಗ್ರಾಮ ಪಂಚಾಯತಿಯಲ್ಲಿ ದುಡಿಯುವ ಸಿಬ್ಬಂದಿಗಳಿಗೆ ಗ್ರಾಮಸ್ಥರು ಪಾವತಿಸುವ ಮನೆ ಕರವೇ ಜೀವಾಳ. ಆದರೆ ಬಹುತೇಕರು ಕರ ಪಾವತಿಸದೇ ಗ್ರಾಮದ ಅಭಿವದ್ಧಿಯ ಜತೆಗೆ ಗ್ರಾಪಂ ಸಿಬ್ಬಂದಿಯ ಬದುಕಿನ ಹಿನ್ನೆಡೆಗೂ ಕಾರಣವಾಗುತ್ತಿರುವುದು ಸರಿಯಲ್ಲ ಎಂದು ಬೀರಲದಿನ್ನಿ ಪಿಡಿಒ ಎಂ.ಎನ್​.ಬಿಷ್ಟಗೊಂಡ ಹೇಳಿದರು.

ಸಮೀಪದ ಅಂಗಡಗೇರಿ ಗ್ರಾಮದಲ್ಲಿ ಮಂಗಳವಾರ ಬೀರಲದಿನ್ನಿ ಗ್ರಾಪಂ ನೇತತ್ವದಲ್ಲಿ ವಾರ್ಡ್​ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗ್ರಾಮಸ್ಥರು ನೀಡುವ ಮನೆಕರದಲ್ಲಿ ಶೇ.60 ರಷ್ಟು ಅಭಿವದ್ಧಿ ಕಾರ್ಯಗಳಿಗೆ ವಿನಿಯೋಗಿಸಿ ಬಾಕಿ ಉಳಿದ ಶೇ.40 ರಷ್ಟು ಗ್ರಾಪಂ ವೇತನ ಮಾಡಬೇಕಿದೆ. ಸರ್ಕಾರದ ಹೊಸ ನಿಯಮದ ಪ್ರಕಾರ ಮನೆಕರ ಸಕಾಲಕ್ಕೆ ಪಾವತಿಸದೇ ಇದ್ದರೆ ಶೇ.10 ರಷ್ಟು ಬಡ್ಡಿ ಹೇರಿಕೆ ಅನಿವಾರ್ಯವೆಂದು ತಿಳಿಸಿದರು.

ಇದೇವೇಳೆ ಗ್ರಾಮಸ್ಥರು ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡ, ರಸ್ತೆ ಸುಧಾರಣೆ, ವಸತಿ ಸೌಲಭ್ಯ ಮತ್ತಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಕಾರ್ಯದರ್ಶಿ ಶೇಖರ ಪವಾರ, ಗ್ರಾಪಂ ಸದಸ್ಯರಾದ ಪರಮಣ್ಣ ಹಡ್ಲಗೇರಿ, ಶರಣಪ್ಪ ಮಾದರ, ಮುದಕಮ್ಮ ಕೂಡಗಿ, ಸಿದ್ದು ಕೊಳಗೇರಿ, ಚಂದ್ರಕಲಾ ಹೊಸಮನಿ, ಶಿಲ್ಪಾ ಹೊಸಮನಿ ಮತ್ತಿತರರು ಇದ್ದರು.