ಜಿಲ್ಲೆ

ಇಂಡಿಯನ್ ಬೈಕ್ ವೀಕ್ ಗೆ ಚಾಲನೆ, ಆಟೋ ಗ್ಲಾಮ್ ಡೀಟೆಲಿಂಗ್ ಸ್ಟುಡಿಯೋನಲ್ಲಿ ಅದ್ದೂರಿ ಕಾರ್ಯಕ್ರಮ

ಹುಬ್ಬಳ್ಳಿ: ನಗರದ ಕಾರ್ ಮತ್ತು ಬೈಕ್ ಡೀಟೆಲಿಂಗ್ ಸ್ಟುಡಿಯೋ ಆಟೋ ಗ್ಲಾಂನಲ್ಲಿ ಶುಕ್ರವಾರ ದುಬಾರಿ ಬೆಲೆಯ ಬಗೆಬಗೆಯ ಬೈಕ್ ಗಳು ಸದ್ದು ಮಾಡಿದವು.

ಇಲ್ಲಿ ಆಯೋಜಿಸಲಾಗಿದ್ದ ಇಂಡಿಯನ್ ಬೈಕ್ ವೀಕ್ ನಲ್ಲಿ (ಸಪ್ತಾಹ) 20 ಜನರ ತಂಡ ಪಾಲ್ಗೊಂಡು ದುಬಾರಿ ಮತ್ತು ಜನಪ್ರಿಯ ಬೈಕ್ ಗಳೊಂದಿಗೆ ಗೋವಾಕ್ಕೆ ತೆರಳಿದರು.

ಸ್ವರ್ಣ ಗ್ರೂಪ್ ಆಫ್ ಕಂಪನಿಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗೋವಾದಲ್ಲಿ ನಡೆಯುವ ಇಂಡಿಯನ್ ಬೈಕ್ ವೀಕ್ನಲ್ಲಿ ಪಾಲ್ಗೊಳ್ಳಲು ಹೊರಟ ಹುಬ್ಬಳ್ಳಿಯ ಸವಾರರಿಗೆ ಶುಭ ಕೋರಿದರು.

ಸಂಘಟಕ ಇಮಾಮ್ ಕೋಳೂರ್ ಮಾತನಾಡಿ, ಪ್ರತಿ ವರ್ಷದಂತೆ ಗೋವಾದ ವಾಗೇಟರ್ನಲ್ಲಿ ನಡೆಯುವ ಇಂಡಿಯನ್ ಬೈಕ್ ವೀಕ್ಗೆ ಸಕಲ ಸಿದ್ಧತೆಯೊಂದಿಗೆ ಸವಾರರು ತೆರಳಿದರು ಎಂದರು.

ಆಟೋ ಗ್ಲಾಮ್ ಡೀಟೆಲಿಂಗ್ ಸ್ಟುಡಿಯೋದ ಶ್ರೀಕೃಷ್ಣ ಬೆಂಗೇರಿ ಹಾಗೂ ಸಾಮ್ರಾಟಸಿಂಗ್ ಜಮಾದಾರ ಅವರ ಕಾರ್ಯಕ್ಕೆ ಮೆಚ್ಚಿಕೆ ವ್ಯಕ್ತಪಡಿಸಿದರು.

ಚಿಟಗುಪ್ಪಿ ಆಸ್ಪತ್ರೆಯ ಡಾ. ಶ್ರೀಧರ, ಡಾ. ಭರತ, ಉದ್ಯಮಿ ಕಾಟವೆ, ನಿರೂಪಕ ಆರ್.ಜೆ. ರಶೀದ್ ಉಪಸ್ಥಿತರಿದ್ದರು.