ಜಿಲ್ಲೆ

ಅಡ್ಡ ಬಂದ ನಾಯಿ ಬೈಕ್ ಸವಾರನ ಸಾವು

ವಿಠ್ಠಲ ಹಣಮಂತ ಬಾಳೇಕುಂದ್ರಿ

ಅಥಣಿ ಗ್ರಾಮೀಣ: ನಾಯಿ ಅಡ್ಡ ಬಂದಿದ್ದರಿಂದ ಬೈಕ್​ ಬಿದ್ದು ಸವಾರ ಮೂಲತ@ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಅಡಹಳ್ಳಟ್ಟಿ ನಿವಾಸಿ ಸುರೇಶ ಹನುಮಂತ ಹುಲ್ಯಾಳ (20) ಮೃತಪಟ್ಟ ಟನೆ ಅಡಹಳ್ಳಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಎಂದಿನಂತೆ ಹೊಲಕ್ಕೆ ಹೋಗುತ್ತಿದ್ದಾಗ ಈ ಟನೆ ನಡೆದಿದ್ದು, ಗಾಯಗೊಂಡಿದ್ದ ಸುರೇಶನನ್ನು ಮಹಾರಾಷ್ಟ್ರದ ಮಿರಜ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸುರೇಶ ಕೊನೆಯುಸಿರೆಳೆದಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಐಗಳಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಐಗಳಿ ಪಿಎಸ್​ಐ ಚಂದ್ರಶೇಖರ ಸಾಗನೂರ, ತನಿಖಾಸಹಾಯಕ ಪ್ರಕಾಶ ಕುರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.