ಜಿಲ್ಲೆ

ರಿಕ್ಷಾ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯ

ಇಂದಿರಾ ಎನ್ ಕೆ

ಕುಂದಾಪುರ: ರಿಕ್ಷಾ ಡಿಕ್ಕಿ ಹೊಡೆದು ಬೈಕ್ ಸವಾರ ಜಯಶೀಲ ಎಂ.ಶೆಟ್ಟಿ ಗಾಯಗೊಂಡ ಟನೆ ಸಲ್ವಾಡಿ ಮೂಡ್ಲಕಟ್ಟೆ ರಸ್ತೆಯಲ್ಲಿ ಭಾನುವಾರ ನಡೆದಿದೆ. ಗಂಭೀರವಾಗಿ ಗಾಯಗೊಂಡ ಜಯಶೀಲ ಶೆಟ್ಟಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವಾದ ರಿಕ್ಷಾ ಚಾಲಕ ಸಂಜೀವ ಪೂಜಾರಿ ರಿಕ್ಷಾದೊಂದಿಗೆ ಪರಾರಿಯಾಗಿದ್ದಾನೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.