ಜೀವನ್ ಗೌಡ  
ಜಿಲ್ಲೆ

ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸಾವು

ಮಾದೇಶ್ ತಿ.ನರಸೀಪುರ

ಶ್ರೀರಂಗಪಟ್ಟಣ: ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಬೊಮ್ಮೂರು ಅಗ್ರಹಾರ ಗ್ರಾಮ ಸಮೀಪ ಇತ್ತೀಚೆಗೆ ಟ್ಯಾಂಕರ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಮೃತಪಟ್ಟಿದ್ದಾನೆ.

ಪಟ್ಟಣದ ನಿವಾಸಿ, ದಿ.ಸತೀಶ್ ಅವರ ಪುತ್ರ ಜೀವನ್‌ಗೌಡ(23) ಮೃತ ಬೈಕ್ ಸವಾರ. ಸೆ.30ರ ಬೆಳಗ್ಗೆ 7.30ರಲ್ಲಿ ಜೀವನಗೌಡ ತನ್ನ ಬೈಕ್‌ನಲ್ಲಿ ಮೈಸೂರು ಕಡೆಗೆ ತೆರಳುತ್ತಿದ್ದಾಗ ಬೊಮ್ಮೂರು ಅಗ್ರಹಾರ ಗ್ರಾಮ ಸಮೀಪ ಹೆದ್ದಾರಿ ಪಕ್ಕದಲ್ಲಿ ಬ್ಯಾರಿಕೇಡ್ ಇಟ್ಟು ಕಬ್ಬು ತುಂಬುತ್ತಿದ್ದ ಲಾರಿಗೆ ಮತ್ತೊಂದು ಟ್ಯಾಂಕರ್ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪಕ್ಕಕ್ಕೆ ಎಳೆದ ವೇಳೆ ಬೈಕ್‌ಗೆ ತಗುಲಿದ್ದರಿಂದ ರಭಸವಾಗಿ ಜೀವನ್‌ಗೌಡ ಹೆದ್ದಾರಿಗೆ ಅಪ್ಪಳಿಸಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು.

ತಕ್ಷಣ ಈತನನ್ನು ಸ್ಥಳದಲ್ಲಿದ್ದ ಜನರು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಿಸಿದ್ದರು. 12 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಭಾನುವಾರ ಕೊನೆಯುಸಿರೆಳೆದಿದ್ದಾನೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.