ಜಿಲ್ಲೆ

ಟ್ರಾೃಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಮಾದೇಶ್ ತಿ.ನರಸೀಪುರ

ತಿ.ನರಸೀಪುರ: ಪಟ್ಟಣದ ಎಪಿಎಂಸಿ ಮುಂಭಾಗದ ರಸ್ತೆಯಲ್ಲಿ ಶನಿವಾರ ರಾತ್ರಿ ಟ್ರಾೃಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾಗಿದ್ದಾನೆ.

ಪಟ್ಟಣದ ಹೆಳವರಹುಂಡಿ ನಿವಾಸಿ ವೀರಭದ್ರಪ್ಪ ಅವರ ಪುತ್ರ ವಿ.ಬಸವಣ್ಣ(35) ಮೃತಪಟ್ಟವರು. ವೃತ್ತಿಯಲ್ಲಿ ಚಾಲಕರಾಗಿದ್ದ ಬಸವಣ್ಣ, ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಎಪಿಎಂಸಿ ಮುಂಭಾಗ ರಸ್ತೆಯಲ್ಲಿ ಎಡಭಾಗದಲ್ಲಿ ಬರಬೇಕಿದ್ದ ಕಬ್ಬಿನ ಟ್ರಾೃಕ್ಟರ್ ಬಲಭಾಗದಲ್ಲಿ ಎದುರಿಗೆ ಬಂದು ಡಿಕ್ಕಿ ಹೊಡೆದ್ದರಿಂದ ಅಪಘಾತ ಸಂಭವಿಸಿದೆ.

ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಬಸವಣ್ಣ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.