ಜಿಲ್ಲೆ

ಅಪಘಾತದಲ್ಲಿ ಬೈಕ್ ಸವಾರ ಸಾವು

ಎನ್.ವೆಂಕಟೇಶ್

ಮಿಟ್ಟೇಮರಿ ಬಳಿ ಬಸ್-ದ್ವಿಚಕ್ರವಾಹನ ನಡುವೆ ಡಿಕ್ಕಿ

ಬಾಗೇಪಲ್ಲಿ: ಸಾರಿಗೆ ಸಂಸ್ಥೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿರುವ ಘಟನೆ

ತಾಲೂಕಿನ ಮಿಟ್ಟೇಮರಿ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.

ಮಿಟ್ಟೇಮರಿ ಗ್ರಾಮದ ಎಂ.ವಿ. ರಂಜಿತ್‌ಕುಮಾರ್ (28) ಮೃತ.

ಕೆಎಸ್‌ಆರ್‌ಟಿಸಿ ಬಸ್ ಬಾಗೇಪಲ್ಲಿಯಿಂದ ಚಿಂತಾಮಣಿಗೆ ತೆರಳುತ್ತಿತ್ತು. ಯುವಕ ಬೈಕ್‌ನಲ್ಲಿ ಮಿಟ್ಟೇಮರಿಯಿಂದ ಬಾಗೇಪಲ್ಲಿಗೆ ಹೋಗುತ್ತಿದ್ದ. ಗ್ರಾಮದ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಯುವಕನ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಹಾಗೂ ಬಸ್‌ನ ಒಂದು ಭಾಗ ನಜ್ಜುಗುಜ್ಜಾಗಿದೆ. ಅಪಘಾತದ ನಂತರ ಬಸ್‌ನ ಚಾಲಕ ಪರಾರಿಯಾಗಿದ್ದಾನೆ.

ಹೆಲ್ಮೆಟ್ ಧರಿಸದೆ, ಅತಿವೇಗದಿಂದ ಬೈಕ್ ಚಾಲನೆ ಮಾಡುತ್ತಿದ್ದುದೇ ಯುವಕನ ಸಾವಿಗೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಬಾಗೇಪಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ನೀಡಲಾಯಿತು. ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.