ಕೋಲಾರ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಟಮಕ ಸಮೀಪದ ಓವರ್ ಬಳಿ ಭಾನುವಾರ ದ್ವಿಚಕ್ರ ವಾಹನ ಅಪಘಾತದಲ್ಲಿ ಬೈಕ್ ಸವಾರ ಸಳ್ಥದಲ್ಲೆ ಮೃತಪಟ್ಟಿದ್ದು, ಹಿಂಬದಿ ಸವಾರ ತೀವ್ರ ಗಾಯಾಗೊಂಡಿದ್ದಾನೆ.
ಬಂಗಾರಪೇಟೆ ತಾಲೂಕಿನ ಜುಂಜನಹಳ್ಳಿ ಭೀಮ (26) ಮೃತ. ಕೋಲಾರದ ಕಠಾರಿಪಾಳ್ಯದ ಸಂತೋಷ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಸ್ತೆ ಅಫಘಾತವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಲೋಕೇಶ್, ಹಾಗೂ ಡಿವೈಎಸ್ಪಿ ನಾಗ್ತೆ ಅವರು ಪರಿಶೀಲನೆ ನಡೆಸಿ ಗಾಯಾಗಳುವನ್ನು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ರವಾನಿಸಿದ್ದರು. ಗಾಯಾಳುವನ್ನು ಆಸ್ಪತ್ರೆ ದಾಖಲಾಗಿದ್ದ ವ್ಯಕ್ತಿಯ ಪಾಲಕರಿಗೆ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸುವ ಮೂಲಕ ಕಷ್ಟ ಕಾಲದ ಆಪತ್ಬಾಂದವರಾಗಿ ಮಾನವೀಯತೆ ಮರೆದರು.