ಕುದೂರು: ಹೋಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಕೆಜಿ ನಗರ ಯು&ರ್ಟನ್ನಲ್ಲಿ ಶನಿವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಬೆಂಗಳೂರು ನಗರದ ನಂದಿನಿ ಲೇಔಟ್ನ ಸಾಕಮ್ಮ ಬಡಾವಣೆಯ ಶಿವಕುಮಾರ್(42) ಮೃತ. ಊರ ಹಬ್ಬಕ್ಕೆಂದು ಹೊಸಪಾಳ್ಯಕ್ಕೆ ಬಂದಿದ್ದ ಶಿವಕುಮಾರ್ ಮನೆಗೆ ಬೇಕಾದ ದಿನಸಿತೆಗೆದುಕೊಳ್ಳಲು ಕೆ.ಜಿ. ನಗರಕ್ಕೆ ಬಂದು ವಾಪಸ್ ತೆರಳಲು ಯುರ್ಟನ್ ಮಾಡುವಾಗ ಕುಣಿಗಲ್ ಕಡೆಯಿಂದ ನೆಲಮಂಗಲಕ್ಕೆ ಹೋಗುವ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಎರಡೂ ಬೈಕಿನ ಚಾಲಕರು ಬಿದ್ದಿದ್ದಾರೆ. ಅದೇ ಮಾರ್ಗವಾಗಿ ಬಂದ ಮತ್ತೊಂದು ಸ್ಕೂಟರ್ ಡಿಕ್ಕಿಯಾಗಿ ಅವರೂ ಬಿದ್ದು ಗಾಯಗೊಂಡರು. ಗಾಯಗೊಂಡ ಮೂವರನ್ನೂ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಶಿವಕುಮಾರ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕುದೂರು ಠಾಣೆಯಲ್ಲಿ ದೂರು ದಾಖಲಾಗಿದೆ.