ಜಿಲ್ಲೆ

ಅಪಘಾತದಲ್ಲಿ ಬೈಕ್​ ಸವಾರ ಸಾವು

ರೇಷ್ಮೆ ನಗರ ಡೆಸ್ಕ್

ಕುದೂರು: ಪಟ್ಟಣದ ಕೆಂಪೇಗೌಡ ಸರ್ಕಲ್​ ಶನಿವಾರ ರಾತ್ರಿ ನಿಂತಿದ್ದ ಬೊಲೆರೋ ಗೂಡ್ಸ್​ಗೆ ಡಿಕ್ಕಿಹೊಡೆದು ಗಂಭೀರ ಗಾಯಗೊಂಡ ಬೈಕ್​ ಸವಾರ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.

ಸಂಭವಿಸಿದೆ.

ಪಟ್ಟಣದ ಲ್ಮದೇವಿನಗರ ನಿವಾಸಿ ಕರಣ್​ (20) ಮೃತ ಯುವಕ. ಕೊರಿಯರ್​ ಬಾಯ್​ ಆಗಿರುವ ಕರಣ್​, ಮರೂರಿನ ಗ್ರಾಹಕರೊಬ್ಬರಿಗೆ ಪಾರ್ಸಲ್​ ಕೊಟ್ಟು ಬರುವಾಗ ದುರ್ಟನೆ ಸಂಭವಿಸಿದೆ. ತೀವ್ರ ಗಾಯಗೊಂಡ ಯುವಕನನ್ನು ಸ್ಥಳಿಯರು ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಮಾರ್ಗ ಮಧ್ಯದಲ್ಲೆ ಯುವಕ ಕೊನೆಯುಸಿರೆಳೆದಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ಯುವಕನ ಕುಟುಂಬದವರು ಕುದೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.