ಜಿಲ್ಲೆ

ಅಪಾತದಲ್ಲಿ ಬೈಕ್​ ಸವಾರ ಸಾವು

ಎನ್.ವೆಂಕಟೇಶ್

ಚಿಂತಾಮಣಿ: ನಗರದ 31ನೇ ವಾರ್ಡ್​ನ ತಿಮ್ಮಸಂದ್ರ ಬಳಿ ಮಧ್ಯರಾತ್ರಿ ಬೈಕ್​ ಮತ್ತು ಟಾಟಾ ಏಸ್​ ನಡುವೆ ಡಿಕ್ಕಿಯಾಗಿ ಬೈಕ್​ ಸವಾರ ಮೃತಪಟ್ಟಿದ್ದಾನೆ. ಶಿಡ್ಲಟ್ಟ ನಗರದ ವಾರ್ಡ್​ ನಂ.18ರ ಅಜಾದ್​ ನಗರದ ಪರ್ವೀಜ್​ ಪಾಷಾ (25) ಮೃತ. ಚಿಂತಾಮಣಿ ತಾಲೂಕಿನ ಮುರುಗಮಲ್ಲಾ ಗ್ರಾಮದಲ್ಲಿ ರಾತ್ರಿ ನಡೆದ ಗಂಧೋತ್ಸವದಲ್ಲಿ ಭಾಗಿಯಾಗಿ ನಂತರ ಬೈಕ್​ನಲ್ಲಿ ಶಿಡ್ಲಟ್ಟ ಕಡೆ ಹೋಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಟಾಟಾ ಏಸ್​, ಬೈಕ್​ ನಡುವೆ ಡಿಕ್ಕಿಯಾಗಿ ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸುವಾಗ ದಾರಿಯ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ. ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತನ ಕುಟುಂಬದವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.