ಗುಂಡ್ಲುಪೇಟೆ: ತಾಲೂಕಿನ ಲಕ್ಕೂರು ಗೇಟ್ ಸಮೀಪ ವೇಗವಾಗಿ ಸಾಗುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಸಕಲೇಶಪುರ ಮೂಲದ ಮಂಜುನಾಥ್(26) ಮೃತರು. ಸಕಲೇಶಪುರದಿಂದ ತಮ್ಮ ಬುಲೆಟ್ ಬೈಕ್‌ನಲ್ಲಿ ಊಟಿಗೆ ಹೊರಟಿದ್ದ ಮಂಜುನಾಥ್ ಮತ್ತು ಜಾಕೋಬ್ ಚಾಮರಾಜನಗರ ಮಾರ್ಗವಾಗಿ ಮಂಗಳವಾರ ಬೆಳಗ್ಗೆ ಪಟ್ಟಣಕ್ಕೆ ಬರುವಾಗ ಲಕ್ಕೂರು ಗೇಟ್ ಸಮೀಪ ಅಪಘಾತ ಸಂಭವಿಸಿದೆ. ಚಾಮರಾಜನಗರಕ್ಕೆ ಅತಿ ವೇಗವಾಗಿ ಸಾಗುತ್ತಿದ್ದ ಕೇರಳದ ವೈನಾಡು ಮೂಲದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮಂಜುನಾಥ್ ಎದೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ತೆರಕಣಾಂಬಿ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದರು. ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.