ಜಿಲ್ಲೆ

ಬೈಕ್​ಗೆ ಕಾರು ಡಿಕ್ಕಿಯಾಗಿ ಸವಾರ ಸಾವು

ಉಳ್ಳಾಗಡ್ಡಿ-ಖಾನಾಪೂರ: ಯಮಕನಮರಡಿ ಕಡೆಯಿಂದ ಸಂಕೇಶ್ವರದತ್ತ ತೆರಳುತ್ತಿದ ಕಾರೊಂದು ಉಳ್ಳಾಗಡ್ಡಿ&ಖಾನಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟು, ಇಬ್ಬರು ಗಾಯಗೊಂಡ ಟನೆ ಶನಿವಾರ ನಡೆದಿದೆ.

ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ಚಂದನಕೂಡ ಗ್ರಾಮದ ಲಕ್ಕಪ್ಪ ರಾಮಾ ಬೋಲಗೇರಿ(77)ಮೃತ ಬೈಕ್​ ಸವಾರ. ಮತ್ತೊಂದು ಬೈಕ್​ನ ಯಮಕನಮರಡಿಯ ಕೆಂಪಣ್ಣಾ ಹಣಮಂತ ಬರಗಾಲಿ, ಭೀಮಪ್ಪ ಸುರೇಶ ಬರಗಾಲಿ ಗಾಯಗೊಂಡವರು.

ಉಳ್ಳಾಗಡ್ಡಿ&ಖಾನಾಪುರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಮೊದಲು ಒಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್​ ಸವಾರ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಇದೇ ಕಾರು ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್​ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಯಮಕನಮರಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.