ಜಿಲ್ಲೆ

ರಾಜಧಾನಿಯಲ್ಲಿ ಹೆಚ್ಚಾಯಿತು ಬೈಕ್​ ಕಳ್ಳರ ಹಾವಳಿ: ಕಾಂಪೌಂಡ್ ಒಳಗೆ ಬೈಕ್​ ನಿಲ್ಲಿಸಿದ್ದರೂ ಬಿಡೋದಿಲ್ಲ ಖದೀಮರು

Mandara

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ದಿನೇದಿನೆ ಬೈಕ್​ ಕಳ್ಳರ ಹಾವಳಿ ಹೆಚ್ಚುತ್ತಿದ್ದು ಇದೀಗ ಮತ್ತೊಂದು ಬೈಕ್​ ಕಳ್ಳತನದ ಪ್ರಕರಣ ದಾಖಲಾಗಿದೆ.

ನಗರದ ಲಿಂಗರಾಜ್​ ಪುರಂನ ಶರವಣ ಎನ್ನುವವರು ತಮ್ಮ ಮನೆಯ ಕಾಂಪೌಂಡ್​ ಒಳಗೆ RX 135 ಬೈಕ್​ ನಿಲ್ಲಿಸಿದ್ದರು. ರಾತ್ರಿ ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ ಎನ್ನುವುದನ್ನು ಖಾತ್ರಿ ಮಾಡಿಕೊಂಡ ಕಳ್ಳನೊಬ್ಬ ಕಾಂಪೌಂಡ್​ ಒಳಗೆ ನುಗ್ಗಿ ಬೈಕ್​ನ್ನು ಕದ್ದಿದ್ದಾನೆ.

ಕಳ್ಳ ಕಾಂಪೌಂಡ್​ ಒಳಗಿಂದ ಬೈಕನ್ನು ಕದ್ದು ಸಾಗುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬಾಣಸವಾಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ,