ಜಿಲ್ಲೆ

ಬೈಕ್​ ಕಳ್ಳನ ಬಂಧನ, ಇನ್ನೊಬ್ಬ ಪರಾರಿ

ಎನ್.ವೆಂಕಟೇಶ್

 7 ದ್ವಿಚಕ್ರ ವಾಹನಗಳ ವಶಕ್ಕೆ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ

ಹಲವು ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರವಾಹನಗಳ ಕಳವು ಪ್ರಕರಣ ಸಂಬಂಧಿಸಿದಂತೆ ಒಬ್ಬನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿ, 7 ಬೈಕ್​ಗಳನ್ನು ವಶಕ್ಕೆ ಪಡೆದಿದ್ದು, ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ.

ಎ1 ಆರೋಪಿ ಬಾಗೇಪಲ್ಲಿಯ ನರಸಿಂಹಮೂರ್ತಿ ಬಂಧಿತ. ಎ2 ಆರೋಪಿ ಜೈ ಕುಮಾರ್​ ತಲೆಮರೆಸಿಕೊಂಡಿದ್ದಾನೆ.

ಈ ಇಬ್ಬರೂ ಆರೋಪಿಗಳು ಜಿಲ್ಲೆಯ ನಂಧಿಗಿರಿಧಾಮ, ಶಿಡ್ಲಟ್ಟ, ಬಾಗೇಪಲ್ಲಿ, ಬೆಂ.ಗ್ರಾಮಾಂತರ ಜಿಲ್ಲೆಯ ಯಲಹಂಕ, ರಾಜಾನುಕುಂಟೆ, ಹೊಸಕೋಟೆ, ಚಿಕ್ಕಜಾಲ ಠಾಣೆ ವ್ಯಾಪ್ತಿ ಸೇರಿ ಒಟ್ಟು 7 ದ್ವಿಚಕ್ರ ವಾಹನಗಳನ್ನು ಕದ್ದಿದ್ದರು ಎನ್ನಲಾಗಿದೆ.

ಬಾಗೇಪಲ್ಲಿ ಠಾಣೆ ಇನ್​ಸ್ಪೆಕ್ಟರ್​ ಪ್ರಶಾಂತ್​ ವರ್ಣಿ, ಸಬ್​ ಇನ್​ಸ್ಪೆಕ್ಡರ್​ ನಾಗಮ್ಮ, ಪೊಲೀಸ್​ ಸಿಬ್ಬಂದಿ ವೆಂಕಟರಮಣ, ಸುರೇಶ್​, ಧನಂಜಯ ಕುಮಾರ್​, ಸಾಗರ್​, ವೆಂಕಟಶಿವ, ಕೃಷ್ಣಪ್ಪ, ಶಂಕರಪ್ಪ, ರವಿಕುಮಾರ್​, ಮುರಳಿಕೃಷ್ಣ ಕಾರ್ಯಾಚರಣೆ ನಡೆಸಿದ್ದರು.