ಜಿಲ್ಲೆ

ಬೈಕ್​ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ರಾಣೆಬೆನ್ನೂರ: ನಗರದಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಇಲ್ಲಿಯ ಶಹರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದು ಆತನಿಂದ ಒಂದೂವರೆ ಲಕ್ಷ ರೂ. ಮೌಲ್ಯದ 3 ಬೈಕ್​ ವಶಪಡಿಸಿಕೊಳ್ಳಲಾಗಿದೆ.

ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರಿನ ಕೊರಚರ ಹಟ್ಟಿ ನಿವಾಸಿ ಅಕ್ಷಯ ಆರ್​. ರಮೇಶ (19) ಬಂಧಿತ ಆರೋಪಿ.

ಈತ ಮಟ್ಕಾ ಹಾಗೂ ಇಸ್ಪೀಟ್​ ಆಡುವ ಸಲುವಾಗಿ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್​ಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಕಳ್ಳತನ ಮಾಡಿದ್ದ ಮೂರು ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ಶಹರ ಠಾಣೆ ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ, ಪಿಎಸ್​ಐ&2 ಎಚ್​.ಎನ್​. ದೊಡ್ಡಮನಿ, ಸಿಬ್ಬಂದಿ ಪಿ.ಕೆ. ಸನದಿ, ಪಿ.ಕೆ. ಲಮಾಣಿ, ಎಚ್​.ಟಿ. ನಾಗವತ್​, ಲಿಂಗರಾಜ ಕರಿಗಾರ, ಮೋಹನ ಮೇಲಗೇರಿ, ಎಚ್​.ಎಲ್​. ದನುವಿನಮನಿ, ಮಂಜುನಾಥ ರೋಟಿ, ಕರಿಯಪ್ಪ ಮೆಣಸಿನಾಳ ತಂಡದಲ್ಲಿದ್ದರು.