ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ಹೋಗಿ ಬರುವಷ್ಟರಲ್ಲಿ ವಿದ್ಯಾರ್ಥಿಯ ಬೈಕ್ ಕಳ್ಳತನವಾಗಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿಯ ಚಂದ್ರಾನಾಯ್ಕಾ ಎಂಬಾತ ಬೈಕ್ ಕಳೆದುಕೊಂಡವ. ಈತ ರಾತ್ರಿ 9.15ರ ಸುಮಾರಿಗೆ ತನ್ನ ಬೈಕ್ ಅನ್ನು ಬಸ್ ನಿಲ್ದಾಣ ಎದುರಿನ ಲಾಡ್ಜ್ ಮುಂಭಾಗ ನಿಲ್ಲಿಸಿದ್ದರು. ನಿಲ್ದಾಣದೊಳಗೆ ಹೋಗಿ ರಾತ್ರಿ 10 ಗಂಟೆಗೆ ಹಿಂತಿರುಗಿದ್ದರು. ಈ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಇರಲಿಲ್ಲ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.