ಜಿಲ್ಲೆ

ದ್ವಿಚಕ್ರ ವಾಹನ ಕಳವು ನಾಲ್ವರು ಬಂಧನ

ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ 4 ಮಂದಿ ಆರೋಪಿಗಳನ್ನು ಮಂಗಳೂರು ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿ, 6 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿದ್ದಾರೆ.


ಕಸಬಾ ಬೆಂಗರೆ ನಿವಾಸಿಗಳಾದ ಮೊಹಮ್ಮದ್ ಸಿನಾನ್ (19), ಮೊಹಮ್ಮದ್ ಸಾಹಿಲ್ ಬೆಂಗ್ರೆ (22), ಉಳ್ಳಾಲ ನ್ಯೂತೋಟ ಹೌಸ್ ನಿವಾಸಿ ೈಜಲ್ ಯಾನೆ ತೋಟ ೈಸಲ್ (35), ಮೂಲತಃ ಉಡುಪಿ ಪಡುಬಿದ್ರಿ ನಿವಾಸಿ, ಪ್ರಸ್ತುತ ಬಂಟ್ವಾಳ ನಂದಾವರ ನಿವಾಸಿ ಮೊಹಮ್ಮದ್ ಸಾಹಿಲ್ (18) ಎಂಬವರನ್ನು ಬಂಧಿಸಲಾಗಿದೆ.


ನಗರದ ಗೂಡ್ಸ್ ಶೆಡ್ ಪರಿಸರದಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಎಸಿಪಿ ಪಿಎ ಹೆಗ್ಡೆ ನೇತೃತ್ವದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ವಶಪಡಿಸಿಕೊಂಡ ಬೈಕ್‌ಗಳ ವಿವರ: ತೊಕ್ಕೊಟ್ಟು ಗ್ರಾಂಡ್ ಸಿಟಿ ಕಾಂಪ್ಲೆಕ್ಸ್ ಬಳಿ 2023ರ ಮಾ.27ರಂದು ಕಳವುಗೈದ ಬೈಕ್, ಮಾ.28ರಂದು ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿ ಕಳವುಗೈದ ಬೈಕ್, ಮಾ.7ರಂದು ಕಸಬಾ ಬೆಂಗ್ರೆ ೆರಿ ಬಳಿ ಕಳವುಗೈದ ಸ್ಕೂಟರ್, ಮಾ.27ರಂದು ಕದ್ರಿ ಜಿಮ್ಮಿಸ್ ಸೂಪರ್ ಮಾರ್ಕೆಟ್ ಬಳಿ ಕಳವುಗೈದ ಬೈಕ್, ಮಾ.27ರಂದು ಕೇಂದ್ರ ಮಾರುಕಟ್ಟೆ ಬಳಿಯ ದುಬೈ ಮಾರ್ಕೆಟ್ ಸಮೀಪ ಕಳವಾದ ಬೈಕ್, ಮಾ.30ರಂದು ನಂತೂರು ತಾರೆತೋಟ ಬಳಿಯಿಂದ ಕಳವುಗೈದ ಸ್ಕೂಟರ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ವಾಹನಗಳ ಮೌಲ್ಯ 2.15ಲಕ್ಷ ರೂ. ಎಂದು ಅಂದಾಜಿಸಲಾಗಿದೆ.