ಜಿಲ್ಲೆ

ಗ್ಯಾರೇಜ್‌ನಿಂದ ಬೈಕ್ ಕಳವು

Mangaluru - Nishantha Narayana

ಪುತ್ತೂರು: ಹಾರಾಡಿಯ ಗ್ಯಾರೇಜ್ ಬೀಗ ಮುರಿದು ದುರಸ್ತಿಗೆ ನೀಡಿದ ದ್ವಿಚಕ್ರ ವಾಹನವನ್ನು ಕಳವು ಮಾಡಿದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಲ್ನಾಡು ನಿವಾಸಿ ಕೆ. ಜಯಪ್ರಕಾಶ್ ಅವರ ಹಾರಾಡಿಯಲ್ಲಿರುವ ದ್ವಿಚಕ್ರ ವಾಹನ ದುರಸ್ತಿ ನಡೆಸುವ ಗ್ಯಾರೇಜ್‌ನಲ್ಲಿ ಕಳ್ಳತನ ನಡೆದಿದೆ. ಬನ್ನೂರು ನಿವಾಸಿ ಜಗದೀಶ ಆಚಾರ್ಯ ಅವರಿಗೆ ಸೇರಿದ ಆರ್.ಎಕ್ಸ್. ೧೦೦ ಬೈಕ್ ಕಳವಾಗಿದೆ. ಮಾ.೮ರ ರಾತ್ರಿ ೮ಗಂಟೆಯಿಂದ ೯ರ ಬೆಳಗ್ಗೆ ೧೦.೪೫ ರ ನಡುವೆ ಘಟನೆ ನಡೆದಿದೆ. ಮುಂಭಾಗಿಲಿನ ಶೆಟರ್ ಬೀಗವನ್ನು ಮುರಿದ ಕಳ್ಳರು ನಾಲ್ಕು ದಿನಗಳ ಹಿಂದೆ ರಿಪೇರಿಗೆ ನೀಡಿದ್ದ ಜಗದೀಶ್ ಆಚಾರ್ಯ ಅವರಿಗೆ ಸೇರಿದ ಬೈಕ್ ಕಳವುಗೈದಿದ್ದಾರೆ.

ಬೈಕ್ ಸುಮಾರು ೧.೫೦ ಲಕ್ಷ ರೂ. ಮೌಲ್ಯ ಹೊಂದಿದೆ. ಬೈಕ್ ಕೀ ಗ್ಯಾರೇಜ್ ಮಾಲೀಕನ ಕೈಗೆ ಕೊಟ್ಟಿದ್ದು, ದಾಖಲೆಗಳು ತನ್ನ ಸ್ವಾಽನದಲ್ಲಿರುವುದಾಗಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರನ್ನು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆನ್ನಲಾಗಿದೆ. ಗ್ಯಾರೇಜ್ ಪಕ್ಕದ ನೇತಾಜಿ ರಸ್ತೆಯಲ್ಲಿ ರಾತ್ರಿ ೧೨.೩೦ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಬೈಕ್ ತಳ್ಳಿಕೊಂಡು ಹೋಗುವುದನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆನ್ನಲಾಗಿದೆ. ರಾತ್ರಿ ಗಸ್ತು ಸರಿಯಾಗಿ ನಡೆಯದಿರುವುದೇ ಕಳವು ನಡೆಯಲು ಕಾರಣ ಎನ್ನಲಾಗಿದೆ.