ಜಿಲ್ಲೆ

ದೋಷಪೂರಿತ ಸೈಲೆನ್ಸರ್‌ಗಳ ನಾಶ

Gadag - Shivanand Hiremath

ಗದಗ: ಜುಲೈ.18 ರಿಂದ ಮೂರು ದಿನಗಳ ಕಾಲ ಗದಗ-ಬೆಟಗೇರಿ ಸೇರಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ನಡೆಸಿದ ಅಭಿಯಾನದಲ್ಲಿ ವಶಪಡಿಸಿಕೊಂಡಿದ್ದ ಅತಿ ಹೆಚ್ಚು ಧ್ವನಿ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್‌ಗಳನ್ನು ನಾಶಪಡಿಸಲಾಯಿತು.
ನಗರದ ಸಂಭಾಪೂರ ರಸ್ತೆಯ ಸಂಚಾರ ಠಾಣೆ ಬಳಿಯ ಬಯಲು ಜಾಗೆಯಲ್ಲಿ 85ಕ್ಕೂ ಹೆಚ್ಚು ಸೈಲೆನ್ಸ್ರಗಳನ್ನು ರೋಲರ್ ಹರಿಸಿ, ನಾಶಪಡಿಸಲಾಯಿತು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು, ಗದಗ ಜಿಲ್ಲಾ ಪೊಲೀಸ್ ಇಲಾಖೆ ಜುಲೈ 18 ರಿಂದ 3 ದಿನಗಳ ಕಾಲ ಸತತವಾಗಿ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ, ಗ್ಯಾರೇಜ್ / ಅಟೋಮೊಬೈಲ್ ಅಂಗಡಿಗಳಲ್ಲಿರುವ ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಳ್ಳುವುದು ಹಾಗೂ ಅಪ್ರಾಪ್ತ ವಯಸ್ಸಿನವರ ದ್ವಿಚಕ್ರ ವಾಹನ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿತ್ತು.
ಗದಗ-ಬೆಟಗೇರಿಯ 27 ಸ್ಥಳಗಳಲ್ಲಿ ಸೇರಿ ಉಳಿದಂತೆ ನರಗುಂದ, ಲಕ್ಷೇಶ್ವರ, ಗಜೇಂದ್ರಗಡ, ಮುಂಡರಗಿ, ರೋಣ, ಶಿರಹಟ್ಟಿ ಮತ್ತು ಮುಳಗುಂದ ಠಾಣೆಗಳ ವ್ಯಾಪ್ತಿಯಲ್ಲಿ ಡಿಎಸ್‌ಪಿ ಗದಗ ಉಪವಿಭಾಗ/ನರಗುಂದ ರವರು ಸೇರಿ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡಗಳು ವಿಶೇಷ ಕಾರ್ಯಾಚರಣೆ ನಡೆಸಿ, ಪ್ರಕರಣಗಳನ್ನು ದಾಖಲಿಸಿಕೊಂಡು, ದೋಷಪೂರಿತ ಸೈಲೆನ್ಸರ್ ಅಳವಡಿಸಿದ ವಾಹನ ಚಾಲಕರಿಗೆ / ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿದೆ.
ಯಾವ-ಯಾವ ಪ್ರಕರಣ ಎಷ್ಟೆಷ್ಟು: ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ವಶಕ್ಕೆ ಪಡೆದುಕೊಂಡು 85 ಪ್ರಕರಣ, ಗ್ಯಾರೇಜ್ ಮತ್ತು ಇತರೆ ಸ್ಥಳಗಳಲ್ಲಿ ವಶಕ್ಕೆ ಪಡೆದ ದೋಷಪೂರಿತ ಸೈಲೆನ್ಸರ್‌ಗಳಿಗೆ ಸಂಬAಧಿಸಿದAತೆ ಒಂದು ಸೇರಿ ಒಟ್ಟು 86 ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಇದರೊಂದಿಗೆ ಅಪ್ರಾಪ್ತರಿಂದ ಸ್ವಿಚಕ್ರ ವಾಹನ ಚಲಾಯಿಸುವುದಕ್ಕೆ ಸಂಬAಧಿಸಿದAತೆ 6 ಸಂಶಯುಕ್ತ ಜನರ ವಿರುದ್ಧ ಪ್ರಕರಣ ಸೇರಿ ಒಟ್ಟು 111 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.
ಇವುಗಳ ಪೈಕಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ದ್ವಿ-ಚಕ್ರ ವಾಹನಗಳಿಂದ 38, ಗ್ಯಾರೇಜ್‌ನಿಂದ 4 ದೋಷಪೂರಿತ ಸೈಲೆನ್ಸರ್ ಹಾಗೂ ಸಂಶಯುಕ್ತ ಅಪ್ರಾಪ್ತರ ಚಾಲನೆ ವಿರುದ್ಧ 28 ಜನರ ವಿರುದ್ಧ ಕ್ರಮ ಜರುಗಿಸಲಾಗಿದೆ.
ಇನ್ನುಳಿದಂತೆ ನರಗುಂದದಲ್ಲಿ ದ್ವಿ-ಚಕ್ರ ವಾಹನಗಳಂದ 3 ದೋಷಪೂರಿತ ಸೈಲೆನ್ಸರ್, 3 ಸಂಶಯುಕ್ತ ಅಪ್ರಾಪ್ತರ ಚಾಲನೆ, ಲಕ್ಷೇಶ್ವರದಲ್ಲಿ ದ್ವಿ-ಚಕ್ರ ವಾಹನಗಳಿಂದ 21 ದೋಷಪೂರಿತ ಸೈಲೆನ್ಸರ್, 46 ಸಂಶಯುಕ್ತ ಅಪ್ರಾಪ್ತರ ಚಾಲನೆ, ಗಜೇಂದ್ರಗಡದಲ್ಲಿ ದ್ವಿ-ಚಕ್ರ ವಾಹನಗಳಂದ 4 ದೋಷಪೂರಿತ ಸೈಲೆನ್ಸರ್ ಹಾಗೂ 02 ಸಂಶಯುಕ್ತ ಅಪ್ರಾಪ್ತರ ಚಾಲನೆ, ಮುಂಡರಗಿಯಲ್ಲಿ ದ್ವಿ-ಚಕ್ರ ವಾಹನಗಳಂದ 2, ಗ್ಯಾರೇಜ್‌ಗಳಿಂದ 1 ದೋಷಪೂರಿತ ಸೈಲೆನ್ಸರ್, 3 ಸಂಶಯುಕ್ತ ಅಪ್ರಾಪ್ತರ ಚಾಲನೆ ವಿರುದ್ಧ ಕ್ರಮ ಜರುಗಿಸಲಾಗಿದೆ.
ರೋಣದಲ್ಲಿ ದ್ವಿ-ಚಕ್ರ ವಾಹನಗಳಿಂದ 7 ದೋಷಪೂರಿತ ಸೈಲೆನ್ಸರ್, 2 ಸಂಶಯುಕ್ತ ಅಪ್ರಾಪ್ತರ ಚಾಲನೆ, ಶಿರಹಟ್ಟಿಯಲ್ಲಿ ದ್ವಿ-ಚಕ್ರ ವಾಹನಗಳಿಂದ 7, ಗ್ಯಾರೇಜ್‌ಗಳಿಂದ 1  ದೋಷಪೂರಿತ ಸೈಲೆನ್ಸರ್ ಮತ್ತು ಮುಳಗುಂದದಲ್ಲ ದ್ವಿ-ಚಕ್ರ ವಾಹನಗಳಂದ 3 ದೋಷಪೂರಿತ ಸೈಲೆನ್ಸರ್ ವಶ ಪಡೆದುಕೊಂಡು, ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗದಗ ಉಪವಿಭಾಗ ಡಿವೈಎಸ್‌ಪಿ ಎಂ.ಬಿ. ಸಂಕದ, ಸಿಪಿಐಗಳಾದ ಬಿ.ಜಿ. ಸುಬ್ಬಾಪೂರಮಠ, ಎಚ್.ಎಸ್. ಮರಿಗೌಡ್ರ, ಸಿ.ಎನ್. ಹರಿಹರ, ಜಯಂತ ಗೌಳಿ, ಸಂಚಾರಿ ಠಾಣೆ ಪಿಎಸ್‌ಐ ಸವಿತಾ ಮುಳ್ಳಾಳ ಸೇರಿ ಅನೇಕರು ಇದ್ದರು.
===
- ಅವಳಿ ನಗರ ಸೇರಿ ಜಿಲ್ಲೆಯಲ್ಲಿ ದೋಷಪೂರಿತ ಸೈಲೆನ್ಸ್ರ್‌ಗಳ ಪತ್ತೆ ಹಾಗೂ ಅಪ್ರಾಪ್ತರ ವಾಹನ ಚಲಾವಣೆ ವಿರುದ್ಧ ಅಭಿಯಾನ ನಿರಂತರವಾಗಿರಲಿದೆ. ಕ್ರೇಜ್‌ಗಾಗಿ ಇಂತಹ ಸೈಲೆನ್ಸ್ರ ಬಳಕೆ ನಿಲ್ಲಿಸಬೇಕು ಹಾಗೂ ಪಾಲಕರು ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡಬಾರದು. ಅವಳಿ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿಸಲು ಕೂಡ ಯೋಜನೆ ಹಾಕಿಕೊಳ್ಳಲಾಗಿದೆ.
-ಬಿ.ಎಸ್. ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ