ಜಿಲ್ಲೆ

ಬೈಕ್​ನ ಸೈಡ್​ ಬ್ಯಾಗ್​ನಲ್ಲಿದ್ದ ಹಣ ದೋಚಿದ ಖದೀಮರು

Haveri - Kariyappa Aralikatti

ಸವಣೂರ: ಬೈಕ್​ನ ಸೈಡ್​ ಬ್ಯಾಗ್​ನಲ್ಲಿಟ್ಟದ್ದ ಹಣದ ಬ್ಯಾಗ್​ಅನ್ನು ಯಾರೋ ಖದೀಮರು ಕಳ್ಳತನ ಮಾಡಿಕೊಂಡು ಹೋದ ಘಟನೆ ಇಲ್ಲಿಯ ಹಳೆ ಬಸ್​ ನಿಲ್ದಾಣದ ಬಳಿ ಗುರುವಾರ ನಡೆದಿದೆ.

ಧರ್ಮಪ್ಪ ಶಂಕ್ರಪ್ಪ ಲಮಾಣಿ (67) ಎಂಬುವರ ಹಣ ದೋಚಿರುವುದು.

ಇವರು ಬ್ಯಾಂಕ್​ನಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ 1 ಲಕ್ಷ ರೂ. ತೆಗೆಸಿಕೊಂಡು ಮತ್ತು ತಮ್ಮ ಬಳಿಯಿದ್ದ 63 ಸಾವಿರ ರೂ.ಅನ್ನು ಬ್ಯಾಗ್​ನಲ್ಲಿಟ್ಟು ಬೈಕ್​ನ ಸೈಡ್​ ಬ್ಯಾಗ್​ನಲ್ಲಿಟ್ಟಿದ್ದರು. ಬೈಕ್​ ಪಂಚರ್​ ತಿದ್ದಿಸುವ ಸಲುವಾಗಿ ಅಂಗಡಿ ಎದುರು ನಿಲ್ಲಿಸಿದಾಗ ಯಾರೋ ಹಣ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.