ರಾಣೆಬೆನ್ನೂರ: ಬೈಕ್ನ ಸೈಡ್ ಬ್ಯಾಗ್ನಲ್ಲಿಟ್ಟಿದ್ದ 4.50 ಲಕ್ಷ ರೂ. ಹಣವನ್ನು ಯಾರೋ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಶಿವಾನಂದ ಗಣೇಶಪ್ಪ ಕನ್ನಪ್ಪಳವರ (44) ಎಂಬುವರ ಹಣ ಕಳ್ಳತನ ಮಾಡಿರುವುದು.
ಇವರು ತಮ್ಮ ಬೈಕ್ನ ಸೈಡ್ ಬ್ಯಾಗ್ನಲ್ಲಿ 4.50 ಲಕ್ಷ ರೂ. ಹಣವಿಟ್ಟುಕೊಂಡು ಗ್ರಾಮದ ಮಹಾತ್ಮ ಗಾಂಧಿ ವೃತ್ತದಲ್ಲಿ ನೀರು ಕುಡಿಯಲು ಎಂದು ಬೈಕ್ ರಸ್ತೆ ಬದಿ ನಿಲ್ಲಿಸಿ ಹೋಟೆಲ್ಗೆ ಹೋದಾಗ ಯಾರೋ ಬ್ಯಾಗ್ನಲ್ಲಿದ್ದ ಹಣ ಕಳ್ಳತನ ಮಾಡಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.