ಸರ್ಕಾರಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುವ ಬೈಕ್.  
ಜಿಲ್ಲೆ

ಬೈಕ್ ಸವಾರರಿಗೆ ಗಂಭೀರ ಗಾಯ

Shivamogga - Desk - Vinayakumar D B

ಸಾಗರ: ಗಾಂಧಿನಗರದ ಅಗ್ರಹಾರ ಸರ್ಕಲ್‌ನಲ್ಲಿ ಸೋಮವಾರ ಬೈಕ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವಿನ ಅಪಘಾತದಲ್ಲಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಲ್ಯಾವಿಗೆರೆ ಗ್ರಾಮದ ಗುರುಮೂರ್ತಿ, ಮಧುಕುಮಾರ್, ಜಂಬಾನಿ ಗ್ರಾಮದ ಅಮಯ್ ಗಾಯಗೊಂಡವರು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಯುವಕರಿದ್ದ ಬೈಕ್ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಸರ್ಕಾರಿ ಬಸ್ ಚಾಲಕ ಈ ಸಂಬಂಧ ದೂರು ನೀಡಿದ್ದಾರೆ.