ಜಿಲ್ಲೆ

ಅಪಘಾತ, ಬೈಕ್ ಸವಾರ ಸಾವು

ಶಿಗ್ಗಾಂವಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪೆಟ್ರೋಲ್ ಬಂಕ್ ಬಳಿ ಬೈಕ್​ಗೆ ಖಾಸಗಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶ್ಯಾಡಂಬಿ ಗ್ರಾಮದ ಶೇಕಪ್ಪ ದ್ಯಾಮಪ್ಪ ಭೀಮನವರ (50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿಎಸ್​ಐ ಪರಶುರಾಮ ನಿರೋಳ್ಳಿ ತನಿಖೆ ಕೈಗೊಂಡಿದ್ದಾರೆ.