ಜಿಲ್ಲೆ

ಅಪಘಾತದಲ್ಲಿ ಬೈಕ್ ಸವಾರ ಸಾವು

ಶಿರಸಿ: ಅತಿ ವೇಗದಿಂದ ಬೈಕ್ ಚಾಲನೆ ಮಾಡಿ, ವೇಗ ನಿಯಂತ್ರಿಸಲಾಗದೆ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹನುಮಂತಿ ಬಳಿ ಸೋಮವಾರ ಸಂಭವಿಸಿದೆ.

ತಾಲೂಕಿನ ಬಲವಳ್ಳಿ ಸಮೀಪದ ಆಡಳ್ಳಿ ಗ್ರಾಮದ ವಿದ್ಯಾರ್ಥಿ ಮನೋಜ ಗಜಾನನ ಹೆಗಡೆ (19) ಮೃತಪಟ್ಟವ.

ಬೆಳಗಿನ ವೇಳೆ ಇಬ್ಬನಿ ಇದ್ದ ಕಾರಣ ಲಾರಿ ನಿಂತಿದ್ದು, ವಿದ್ಯಾರ್ಥಿಯ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಇಂಡಿಕೇಟರ್ ಅಥವಾ ಯಾವುದೇ ಸೂಚನೆ ಇಲ್ಲದೆ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದಕ್ಕೆ ಲಾರಿ ಚಾಲಕನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.