ಹುಬ್ಬಳ್ಳಿ: ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿಯ ಉಣಕಲ್ ಹೊಸ ಸಿದ್ದಪ್ಪಜ್ಜನ ದೇವಸ್ಥಾನ ಬಳಿ ತಡರಾತ್ರಿ ಸಂಭವಿಸಿದೆ.
ಗಿರಣಿಚಾಳದ ನಿವಾಸಿ ರಾಹುಲ ಹಿರೇಮನಿ ಮೃತ ಯುವಕ. ಬೈಕ್ ಸ್ಪೀಡಾಗಿದ್ದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.