ಜಿಲ್ಲೆ

ಬೈಕ್​ನಿಂದ ಬಿದ್ದು ಸವಾರ ಸಾವು

Haveri - Kariyappa Aralikatti

ರಾಣೆಬೆನ್ನೂರ: ಬೈಕ್​ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಕಜ್ಜರಿ ಗ್ರಾಮದ ಬಳಿ ಸೋಮವಾರ ನಡೆದಿದೆ.

ಗ್ರಾಮದ ಚನ್ನಬಸಪ್ಪ ಫಕ್ಕೀರಪ್ಪ ಕನಕಾಪುರ (40) ಮೃತ ವ್ಯಕ್ತಿ.

ಈತ ಕಾಕೋಳ ಗ್ರಾಮದಿಂದ ಕಜ್ಜರಿ ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ಬೈಕ್​ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.