ಹರಿಹರ: ನಗರದ ರಾಘವೇಂದ್ರ ಮಠದ ಬಳಿಯ ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಸಾರಥಿ ಗ್ರಾಮದ ಮಾರುತಿ ಬಿ.ಎಸ್. (20) ಮೃತ ಯುವಕ.
ಬೈಕ್ ಸವಾರ ಮಾರುತಿ ಬಿ.ಎಸ್. ಹಿಂಬದಿಯಲ್ಲಿ ದೀಟೂರು ಗ್ರಾಮದ ಕೊಟ್ರೇಶ್‌ನನ್ನು ಕೂರಿಸಿಕೊಂಡು ಹರಿಹರದಿಂದ ಕುಮಾರಪಟ್ಟಣಂ ಕಡೆಗೆ ಹೋಗುತ್ತಿದ್ದಾಗ ಎದುರಿಗೆ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.
ಗಾಯಾಳು ಕೊಟ್ರೇಶ್‌ಗೆ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.