ಜಿಲ್ಲೆ

ಪರಶುರಾಮಪುರದಲ್ಲಿ ಬೈಕ್ ರ‌್ಯಾಲಿ

Davangere - Desk - Mahesh Babu E

ಪರಶುರಾಮಪುರ: ಪರಶುರಾಮಪುರ ತಾಲೂಕು ಹೋರಾಟಕ್ಕೆ ಹೋಬಳಿ ಜನರು ಸಜ್ಜಾಗಿದ್ದು, ಆ.17ರಂದು ಚಳ್ಳಕೆರೆಯಲ್ಲಿ ರೈತಸಂಘ ನೇತೃತ್ವದಲ್ಲಿ ಪ್ರತಿಭನೆ ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಹೋಬಳಿಯ ಜನರಲ್ಲಿ ಜಾಗೃತಿ ಮೂಡಿಸಲು ಬುಧವಾರ ರಾಜ್ಯ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೈಕ್ ರ‌್ಯಾಲಿ ನಡೆಸಲಾಯಿತು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ ಚಾಲನೆ ನೀಡಿ, ನೌಕರರು, ವ್ಯಾಪಾರಿಗಳು, ರೈತರು ಮಹಿಳೆಯರು, ಆಟೋ-ಲಘು ವಾಹನಗಳ ಚಾಲಕ-ಮಾಲೀಕರು ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದರು.

ತಾಲೂಕಾಧ್ಯಕ್ಷ ಕೆ.ಚಿಕ್ಕಣ್ಣ, ಕಾರ್ಯಾಧ್ಯಕ್ಷ ಜೆಜೆ ಗುಂಟೆ ಹನುಮಂತರಾಯ, ಗೌರವಾಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಸಂಘಟಕ ವೆಂಕಟರಮಣಪ್ಪ, ತಾ.ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ, ಉಪಾಧ್ಯಕ್ಷ ಜಂಪಣ್ಣ, ಹೋಬಳಿ ಘಟಕದ ಅಧ್ಯಕ್ಷ ನವೀನಗೌಡ, ಉಪಾಧ್ಯಕ್ಷ ಪರಮೇಶಣ್ಣ, ಶಾಂತಣ್ಣ, ತಿಮ್ಮಣ್ಣ, ರತ್ನಪ್ಪ ಇದ್ದರು.