ಜಿಲ್ಲೆ

ವಿಜಯವಾಣಿಯಿಂದ ಮಹಿಳಾ ದಿನಚರಣೆ, ಬೈಕ್ ರ್ಯಾಲಿ

ಹುಬ್ಬಳ್ಳಿ: ಕನ್ನಡದ ನಂಬರ್ ೧ ಪತ್ರಿಕೆ ವಿಜಯವಾಣಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಬೈಕ್ ರ್ಯಾಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ನೂರಾರು ಮಹಿಳೆಯರು ರ್ಯಾಲಿಯಲ್ಲಿ ಪಾಲ್ಗೊಂಡು ಉತ್ಸಾಹದಿಂದ ಬೈಕ್ ಓಡಿಸಿದರು.

ಹುಬ್ಬಳ್ಳಿಯ ತೋಳನಕೆರೆಯಿಂದ ಆರಂಭವಾದ ರ್ಯಾಲಿ ಟೆಂಡರ್ ಶ್ಯೂರ್ ರಸ್ತೆ ಮೂಲಕ ಸಾಗಿ ಕಾಡಸಿದ್ದೇಶ್ವರ ಕಾಲೇಜ್ ಮಾರ್ಗವಾಗಿ ಕಿಮ್ಸ್ ಗೇಟ್ ವರೆಗೆ ಸಾಗಿತು. ಅಲ್ಲಿಂದ ವಾಪಸ್ ಅದೇ ಮಾರ್ಗವಾಗಿ ತೋಳನಕೆರೆ ತಲುಪಿತು.