ಜಿಲ್ಲೆ

ಕಾರ್ಗಿಲ್ ವಿಜಯೋತ್ಸವ: ಮಾಜಿ ಸೈನಿಕರಿಂದ ಬೈಕ್ ರ‍್ಯಾಲಿ

Vijayanagara - Veerendra

ಹೊಸಪೇಟೆ: ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವಿಜಯನಗರ ಜಿಲ್ಲಾ ಘಟಕದಿಂದ ಸೋಮವಾರ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

ನಗರದ ಒಡಕರಾಯ ದೇವಸ್ಥಾನದಿಂದ ಪ್ರಾರಂಭವಾಗಿ ಮೇನ್ ಬಜಾರ್ ರಸ್ತೆ  ಪಾದಗಟ್ಟೆ ಆಂಜನೇಯ ದೇವಸ್ಥಾನ , ಹಜರತ್ ಸೈಯದ್ ಮೊಹಮ್ಮದ್ ಶಾವಲಿ ದುರ್ಗಾ ಮಸೀದಿ, ಮೂರಂಗಡಿ ಸರ್ಕಲ್, ಬಸ್ ನಿಲ್ದಾಣ, ಪುನೀತ್ ರಾಜಕುಮಾರ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಿಜಯನಗರ ಕಾಲೇಜು ರಸ್ತೆ, ೧೦೦ ಬೆಡ್ ಸರ್ಕಾರಿ ಆಸ್ಪತ್ರೆ, ಎಪಿಎಂಸಿ  ಸರ್ಕಲ್, ಸಾಯಿಬಾಬಾ ದೇವಸ್ಥಾನ ಮೂಲಕ ಪಿಡಿಐಟಿ ಇಂಜಿನಿಯರಿAಗ್ ಕಾಲೇಜಿಗೆ ತಲುಪಿ ಮುಕ್ತಾಯಗೊಂಡಿತು.ರ‍್ಯಾಲಿಯಲ್ಲಿ ೫೦ಕ್ಕೂ ಹೆಚ್ಚು ಮಾಜಿ ಸೈನಿಕರು ಪಾಲ್ಗೊಂಡಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರ ಪರ ಜಯಘೋಷ ಮೊಳಗಿಸಿದರು.