ಜಿಲ್ಲೆ

ಬೈಕ್​ನಿಂದ ಬಿದ್ದು ಸವಾರ ಸಾವು

Haveri - Kariyappa Aralikatti

ಶಿಗ್ಗಾಂವಿ: ಬೈಕ್​ ನಿಯಂತ್ರಣ ತಪ್ಪಿ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಶಿಗ್ಗಾಂವಿ-&ಸವಣೂರ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ವೆಂಕಟೇಶ ಹನುಮಂತಪ್ಪ ವಡ್ಡರ (35) ಮೃತ ವ್ಯಕ್ತಿ.

ಈತ ಬೈಕ್​ ಮೇಲೆ ಶಿಗ್ಗಾಂವಿ ಕಡೆಯಿಂದ ಸವಣೂರ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಬೈಕ್​ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.