ಜಿಲ್ಲೆ

ಬೈಕ್​ಗೆ ಮಿನಿ ಗೂಡ್ಸ್​ ವಾಹನ ಡಿಕ್ಕಿಯಾಗಿ ಓರ್ವ ಸಾವು

Haveri - Kariyappa Aralikatti

ರಾಣೆಬೆನ್ನೂರ: ಬೈಕ್​ಗೆ ಅಶೋಕ ಲೈಲ್ಯಾಂಡ್​ ಮಿನಿ ಗೂಡ್ಸ್​ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಹಿಂಬದಿ ಸವಾರ ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಗ್ರಾಮದ ನಡೆದಿದೆ.

ಹರಿಹರ ತಾಲೂಕಿನ ಕೊಕ್ಕನೂರ ಗ್ರಾಮದ ಮಲ್ಲಪ್ಪ ಹನುಮಂತಪ್ಪ ಗಡ್ಡದರ ಮೃತ ವ್ಯಕ್ತಿ.

ಇವರು ಬೈಕ್​ ಮೇಲೆ ರಾಣೆಬೆನ್ನೂರ ಕಡೆಯಿಂದ ಹಲಗೇರಿ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಅಶೋಕ ಲೈಲ್ಯಾಂಡ್​ ಮಿನಿ ಗೂಡ್ಸ್​ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಲ್ಲಪ್ಪ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.