ಜಿಲ್ಲೆ

ಕರ್ತವ್ಯನಿರತ ಟ್ರಾಫಿಕ್​ ಪೊಲೀಸ್​ಗೇ ಬೈಕ್​ ಡಿಕ್ಕಿ; ಗಂಭೀರವಾಗಿ ಗಾಯಗೊಂಡ ಕಾನ್​​ಸ್ಟೆಬಲ್​

ಬೆಂಗಳೂರು: ವೇಗದ ಹಾಗೂ ಅಜಾಗರೂಕತೆಯ ಚಾಲನೆಯನ್ನು ತಡೆಯಲೆಂದೇ ಸಂಚಾರ ಪೊಲೀಸರು ರಸ್ತೆಯಲ್ಲಿ ನಿಂತಿರುತ್ತಾರೆ. ಇನ್ನು ಸಿಗ್ನಲ್ ಇದ್ದರೂ ಲೆಕ್ಕಿಸದ ಸವಾರರು, ಸಿಗ್ನಲ್ ಬಳಿ ಪೊಲೀಸ್ ಇದ್ದರೆ ಸಂಚಾರ ನಿಯಮ ಉಲ್ಲಂಘಿಸಲು ಹಿಂಜರಿಯುತ್ತಾರೆ.

ಅಂಥದ್ದರಲ್ಲಿ ಇಲ್ಲೊಬ್ಬ ದ್ವಿಚಕ್ರ ವಾಹನ ಸವಾರ ಕರ್ತವ್ಯನಿರತ ಪೊಲೀಸ್ ಕಾನ್​ಸ್ಟೆಬಲ್​ಗೇ ಬೈಕ್ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಹಲಸೂರು ಗೇಟ್ ಸಂಚಾರ ಠಾಣೆಯ ಕಾನ್​ಸ್ಟೆಬಲ್​ ಮಧುಕುಮಾರ್ (26) ಗಂಭೀರವಾಗಿ ಗಾಯ‌ಗೊಂಡಿದ್ದಾರೆ.

ನಗರದ ಜೆ.ಸಿ. ರಸ್ತೆಯ ಶಿವಾಜಿ ಸಿಗ್ನಲ್ ಬಳಿ ಈ ಅಪಘಾತ ಸಂಭವಿಸಿದೆ. ಗಾಯಾಳು ಮಧುಕರ್​ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.