ರಾಣೆಬೆನ್ನೂರ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎಸ್ಎಫ್ಐ ತಾಲೂಕು ಘಟಕದ ಉಪಾಧ್ಯಕ್ಷ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಮೇಡ್ಲೇರಿ ಕ್ರಾಸ್ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಇಲ್ಲಿಯ ಸಿದ್ದೇಶ್ವರ ನಗರದ ನಿವಾಸಿ ಹಾಗೂ ಭಾರತೀಯ ವಿದ್ಯಾಥಿರ್ ಫೆಡರೇಷನ್ (ಎಸ್ಎಫ್ಐ) ತಾಲೂಕು ಉಪಾಧ್ಯಕ್ಷ ನಿಹಾಲಖಾನ ಸಾಧಿಕಖಾನ ಗಂಗಾವತಿ (19) ಮೃತ ಯುವಕ.
ಹೊಸಹುಲಿಹಳ್ಳಿಯ ಹನುಮಂತ ಶ್ರೀಕಾಂತ ಹಾವನೂರ ಹಾಗೂ ಮೇಡ್ಲೇರಿ ಗ್ರಾಮದ ಚಂದ್ರಪ್ಪ ವ್ಯಾಪಾರಿ ಎಂಬುವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಹಾಲಖಾನ ತನ್ನ ಸ್ನೇಹಿತನನ್ನು ಕರೆದುಕೊಂಡು ಮೇಡ್ಲೇರಿಯಿಂದ ರಾಣೆಬೆನ್ನೂರ ಕಡೆಗೆ ಬರುತ್ತಿದ್ದ ಸಮಯದಲ್ಲಿ ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿಯಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.