ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಸೇಡಂ ರಿಂಗ್‌ರೋಡ್‌ದಿAದ ಹಾಗರಗಾ ಕ್ರಾಸ್ ಕಡೆಗೆ ಹೋಗುತ್ತಿದ್ದ ವೇಳೆಯಲ್ಲಿ ಬೈಕ್ ಅಪಘಾತಕ್ಕೀಡಾಗಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.
ರಾಮು ಪವಾರ (೨೦) ಮೃತಪಟ್ಟ ಯುವಕ. ನಗರದ ಧರಿಯಾಪುರ ಕೋಟನೂರ ಬಡಾವಣೆ ನಿವಾಸಿಯಾಗಿದ್ದ. ಸೇಹಿತನ ಬರ್ಥ್ ಡೇ ಪಾರ್ಟಿಗೆ ಬೈಕ್ ಮೇಲೆ ಹೋಗುತ್ತಿರುವಾಗ ಅವಘಡ ಸಂಭವಿಸಿದೆ.
ರಾಮುನ ತಂದೆ ಸಂತೋಷ ಪವಾರ ಕೆಇಬಿಯಲ್ಲಿ ಲೈನ್‌ಮೆನ್ ಆಗಿ ಕೆಲಸ ಮಾಡುತ್ತಿದ್ದು, ಮಂಗಳವಾರ ರಾತ್ರಿ ಮನೆಯಲ್ಲಿದ್ದ ವೇಳೆಯಲ್ಲಿ ಸ್ನೇಹಿತ ಜನ್ಮದಿನವಿದೆ. ಪಾರ್ಟಿಗೆ ಹೋಗಿ ಬರುವುದಾಗಿ ಸಚಿನ್, ಅಭಿಷೇಕ ಜತೆಗೂಡಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಕೆಸಿಟಿ ಕಾಲೇಜು ಬಳಿ ಸ್ಕೀಡ್ ಆಗಿದೆ. ಸಂಚಾರ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ.