ಜಿಲ್ಲೆ

ಬೈಕ್ ಅಪಘಾತ: ಓರ್ವ ಸಾವು

Vijayanagara - Veerendra

ಹೊಸಪೇಟೆ: ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

ಸಂಡೂರು ನಿವಾಸಿ ಮಹೇಶ ಕುಮಾರ್(೩೦), ಹಿಂಬದಿಯಲ್ಲಿ ಕುಳಿತಿದ್ದ ಅವರ ತಂದೆ ದುರಗಪ್ಪ ಹಾಗೂ ಮತ್ತೊಂದು ಬೈಕ್‌ನ ಚಾಲಕ ರಾಮಾಂಜನಿ ಗಾಯಗೊಂಡಿದ್ದಾರೆ.

ಗಾಳೆಮ್ಮನಗುಡಿಯಲ್ಲಿರುವ ದುರುಗಪ್ಪ ತಮ್ಮ ಮಗಳ ಮನೆಯಿಂದ ಸಂಡೂರಿಗೆ ತೆರಳುತ್ತಿದ್ದರು. ಬಿಎಂಎಂ ಕಂಪನಿ ಬಳಿಯ ಸರ್ವೀಸ್ ರಸ್ತೆಯಲ್ಲಿ

ಎದುರು ಮುಖವಾಗಿ ಬಂದ ರಾಮಾಂಜನಿ ಅವರ ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.