ಜಿಲ್ಲೆ

ವಿಜಯರತ್ನ' ಪ್ರಶಸ್ತಿ ಪಡೆದ ವಿಜಯಪುರದ ಬಿಜ್ಜರಗಿ ಗ್ರುಪ್​ ಆಫ್​ ಕಂಪನಿ

ಮಲೇಷಿಯಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ನಂ.1ದಿನಪತ್ರಿಕೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ "ವಿಜಯರತ್ನ' ಪ್ರಶಸ್ತಿ ಪಡೆದ ವಿಜಯಪುರದ ಬಿಜ್ಜರಗಿ ಗ್ರುಪ್​ ಆಫ್​ ಕಂಪನಿ ಮಾಲೀಕ ರಾಜು ಬಿಜ್ಜರಗಿ ಅವರಿಗೆ ವಿಮಾನ ನಿಲ್ದಾಣ ಸಮಿತಿ ಹಾಗೂ ರೈಲು ಹೋರಾಟ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಸಮಿತಿ ಅಧ್ಯಕ್ಷ ಸತೀಶ ಭಾವಿ, ಉಪಾಧ್ಯಕ್ಷ ಈರಣ್ಣ ಅಳ್ಳಗಿ, ಸಾಗರ ಮೊಗಲಿ, ಭಾವೇಶ ಪೋರವಾಲ, ಮಹೇಶ ಭಾವಿ ಮತ್ತಿತರರಿದ್ದರು.