ಜಿಲ್ಲೆ

ಒಟಿಟಿಯಲ್ಲೂ ಟಾಪರ್​ ಆಗಿದ್ದ ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಸೀಸನ್​-9 ವಿನ್ನರ್​: ಬಹುಮಾನವಾಗಿ ಸಿಕ್ಕ ಹಣ ಎಷ್ಟು ಗೊತ್ತಾ?

arunakunigal

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 9ರ ವಿನ್ನರ್​ ಆಗಿ ನಟ ರೂಪೇಶ್​ ಶೆಟ್ಟಿ ಹೊರಹೊಮ್ಮಿದ್ದಾರೆ.

ಬಿಗ್​ಬಾಸ್​ ಸೀಸನ್​ 9 ಕಳೆದ ಸೆ. 24ರಂದು ಪ್ರಾರಂಭವಾಗಿತ್ತು. ಬಿಗ್​ಬಾಸ್​ ಮನೆಯಲ್ಲಿ ನೂರು ದಿನ ಪೂರೈಸಿ, ಅತಿಹೆಚ್ಚು ಮತಗಳನ್ನು ಪಡೆಯುವ ಮೂಲಕ ಕರಾವಳಿಯ ಪ್ರತಿಭೆ ರೂಪೇಶ್​ ಶೆಟ್ಟಿ ವಿಜೇತರಾಗಿದ್ದಾರೆ. ಒಟಿಟಿಯಲ್ಲೂ ಇವರೇ ಟಾಪರ್​ ಆಗಿದ್ದರು. ಇವರಿಗೆ ಕಠಿಣ ಸವಾಲೊಡ್ಡಿದ, ನಟ ರಾಕೇಶ್​ ಅಡಿಗ ರನ್ನರ್​ ಅಪ್​ ಆಗಿದ್ದಾರೆ.

ನಟಿ ದೀಪಿಕಾ ದಾಸ್​ ಮೂರನೇ ಸ್ಥಾನ ಮತ್ತು ಕನ್ನಡಪರ ಹೋರಾಟಗಾರ ರೂಪೇಶ್​ ರಾಜಣ್ಣ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ರೂಪೇಶ್​ ಶೆಟ್ಟಿ ಅವರು ಟ್ರೋಫಿ ಮತ್ತು 50 ಲಕ್ಷ ರೂ. ಬಹುಮಾನ ತಮ್ಮದಾಗಿಸಿಕೊಂಡರು.

ಬಿಗ್​ಬಾಸ್​ ಸೀಸನ್​ 9ರಲ್ಲಿ ಸ್ಪರ್ಧಿಗಳಾಗಿ ರೂಪೇಶ್​ ಶೆಟ್ಟಿ, ರಾಕೇಶ್​ ಅಡಿಗ, ದೀಪಿಕಾ ದಾಸ್​, ರಾಜೇಶ್​ ರೂಪಣ್ಣ ಜತೆಗೆ ದಿವ್ಯಾ ಉರುಡುಗ, ಅರುಣ್​ ಸಾಗರ, ದರ್ಶ್​ ಚಂದ್ರಪ್ಪ, ಪ್ರಶಾಂತ್​ ಸಂಬರಗಿ, ಆರ್ಯವರ್ಧನ್​, ಐಶ್ವರ್ಯಾ ಪೀಸೆ, ಮಯೂರಿ ಕ್ಯಾಟರಿ, ನೇಹಾ ಗೌಡ, ಅಮೂಲ್ಯ ಗೌಡ, ಅನುಪಮಾ ಗೌಡ, ಕಾವ್ಯಶ್ರೀ ಗೌಡ, ವಿನೋದ್​, ಸಾನ್ಯ ಐಯರ್​ ಹಾಗೂ ನವಾಜ್​ ಭಾಗವಹಿಸಿದ್ದರು.