ಜಿಲ್ಲೆ

ಕಳಪೆ ಹಣೆ ಪಟ್ಟಿ ಹೊತ್ತ ಕಾರ್ತಿಕ್​ಗೆ ಕಿಚ್ಚನ ಮೆಚ್ಚುಗೆ ಚಪ್ಪಾಳೆ; ಕಾರ್ತಿಕ್ ಖುಷಿ ಮುಂದೆ ವಿನಯ್​ ಮುಖ ನೋಡೋಕೆ ಆಗ್ತಿಲ್ಲ ಎಂದ್ರು ನೆಟ್ಟಿಗರು

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಾಸರವಾಗುವ ಬಿಗ್​ಬಾಸ್​ ಜನಮನ್ನಣೆ ಪಡೆದಿರುವ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬಿಗ್​ಬಾಸ್ 50 ದಿನ ಪೂರೈಸುತ್ತಿದ್ದಂತೆ​ ಒಂಟಿಮನೆಯ ಸ್ಪರ್ಧಿಗಳ ಆಟ ರಣ ರೋಚಕವಾಗುತ್ತಿದೆ. ಬಿಗ್​ಬಾಸ್​ ನೀಡಿದ್ದ ಗೇಮ್​ಗಳನ್ನು ಯಶಸ್ವಿಯಾಗಿ ಪೂರೈಸುತ್ತಿದ್ದ ಸ್ಪರ್ಧಿಗಳು ಈ ವಾರ ಕೊಂಚ ಎಡವಿದ್ದಾರೆ.

ರಕ್ಕಸರು-ಗಂಧರ್ವರ ಎನ್ನುವ ಎರಡು ತಂಡಗಳನ್ನು ಮಾಡಿ ಬಿಗ್​ಬಾಸ್​ ಟಾಸ್ಕ್​​ ನೀಡಿದ್ದರು. ಎರಡು ತಂಡಗಳ ನಡುವಿನ ಜಿದ್ದಾಜಿದ್ದಿ ವೈಯಕ್ತಿಕ ಮಟ್ಟಕ್ಕೆ ಇಳಿದು ಕುರ್ಚಿಯಿಂದ ಎಬ್ಬಿಸುವ ಟಾಸ್ಕ್​ನಲ್ಲಿ ಸಂಗೀತಾರನ್ನು ಟಾರ್ಗೆಟ್ ಮಾಡಿದ್ದ ಎದುರಾಳಿ ಸ್ಪರ್ಧಿಗಳು, ನೀರಿಗೆ ಸೋಪಿನ ಪುಡಿ, ಟಾಯ್ಲೆಟ್ ತೊಳೆಯುವ ಲಿಕ್ವಿಡ್, ಖಾರದ ಪುಡಿಗಳನ್ನು ಬೆರೆಸಿ ಸಂಗೀತಾ ಮೇಲೆ ಸತತ ದಾಳಿ ಮಾಡಿ ಸಂಗೀತಾ, ಡ್ರೋನ್ ಪ್ರತಾಪ್ ಕಣ್ಣಿಗೆ ಹಾನಿಯಾಗಿ ಇಬ್ಬರನ್ನೂ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ನೀಡಲಾಗಿತ್ತು. ಕ್ಯಾಪ್ಟನ್ ಆಯ್ಕೆ ಮಾಡಲು ಬಿಗ್​ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ತಿರುಗುವ ಹಲಗೆ ಮೇಲಿರುವ ಕುರ್ಚಿಯಲ್ಲಿ ಕುಳಿತು, 13 ನಿಮಿಷಗಳನ್ನು ಮನಸ್ಸಿನಲ್ಲಿಯೇ ಎಣಿಸಿ ಮೇಲೆ ಕಟ್ಟಿರುವ ಗಂಟೆಯನ್ನು ಬಾರಿಸಬೇಕಿತ್ತು. ಈ ವೇಳೆ ವರ್ತೂರ್​ಗೆ ವಿನಯ್​ ಹಿಂಟ್​​ ಕೊಡುವ ಮೂಲಕವಾಗಿ ಕ್ಯಾಪ್ಟನ್​​ ಟಾಸ್ಕ್​​ ಗೆಲ್ಲುವಂತೆ ಮಾಡಿದ್ದರು. ನಂತ್ರ ಕಾರ್ತಿಕ್​​ ಅವರನ್ನು ಕಳಪೆ ಎಂದು ನೀಡಿ ಬಿಗ್​ಬಾಸ್​​ ಮನೆಯೆ ಜೈಲಿಗೆ ಕಳಿಸಲಾಗಿತ್ತು. ಇದೆಲ್ಲಾವನ್ನು ನೋಡಿದ ವೀಕ್ಷಕರು ಕಿಚ್ಚನ ಪಂಚಾಯ್ತಿಗಾಗಿ ಕಾಯುತ್ತಾ ಕುಳಿತಿದ್ದರು. 9 ಗಂಟೆಗೆ ಸರಿಯಾಗಿ ಬಂದ್ರು ನೋಡಿ ಕಿಚ್ಚಾ ಆಗ ಶುರುವಾಗಿದ್ದು ಒಬ್ಬೊಬ್ಬರಿಗೂ ಕಿಚ್ಚನ ಪಾಠ ಶುರುವಾಯ್ತು.

ಬಿಗ್​ಬಾಸ್​​ ಮನೆಯಲ್ಲಿ ನಡೆದ ಎಲ್ಲಾ ಘಟನೆಗಳ ಕುರಿತಾಗಿ ಮಾತನಾಡಿದ ಕಿಚ್ಚ.. ಎಲ್ಲಾ ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಯಾವುದು ತಪ್ಪು, ಒಪ್ಪು ಎನ್ನುವ ಕುರಿತಾಗಿ ಸ್ಪಷ್ಟನೆ ನೀಡುತ್ತಿದ್ದಾರೆ. ‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ಕಳಪೆ ಪಟ್ಟ ಪಡೆದು ಜೈಲಿಗೆ ಹೋದವರು ಕಾರ್ತಿಕ್ . ಚಪ್ಪಲಿ ಎಸೆದರು ಎಂಬ ಕಾರಣಕ್ಕೆ, ಟಾಯ್ಲೆಟ್ ವಿಚಾರವಾಗಿ ಹಾಗೂ ಮೈಮ್‌ನಿಂದಾಗಿ ಕಾರ್ತಿಕ್‌ ‘ಕಳಪೆ’ ಎಂದು ಕೆಲವರು ಟಾರ್ಗೆಟ್ ಮಾಡಿದರು. ಕಾರ್ತಿಕ್​​ ಮಾತ್ರ ತನ್ನ ಆಟವನ್ನು ಸರಿಯಾಗೆ ಆಡುತ್ತಿದ್ದರು. ಇಷ್ಟೆಲ್ಲದರ ಮಧ್ಯೆ ಆಡಿ.. ತಮ್ಮತನ ಬಿಟ್ಟುಕೊಡದೆ, ಹಠ ಇಟ್ಟುಕೊಂಡು ಆಡಿ, ಬಹಳಷ್ಟು ನೋಡಿದ ನಂತರ ನನಗೆ ಅನಿಸಿದ್ದು ಈ ವಾರದ ಕಿಚ್ಚನ ಚಪ್ಪಾಳೆ ಕಾರ್ತಿಕ್‌.. ನಿಮಗೆ..’’ ಎಂದು ಹೇಳಿ ಕಾರ್ತಿಕ್‌ಗೆ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು ಸುದೀಪ್.

ಕಿಚ್ಚ ಸುದೀಪ್ ಅವರಿಂದ ಮೆಚ್ಚುಗೆಯ ಚಪ್ಪಾಳೆ ಪಡೆದ ಕಾರ್ತಿಕ್‌ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಕಿಚ್ಚನ ಚಪ್ಪಾಳೆ ಕಾರ್ತಿಕ್​ಗೆ ಸಿಗುತ್ತಿದ್ದಂತೆ ಬಿಗ್​ಬಾಸ್​​ ಮನೆಯಲ್ಲಿರುವ ಕೆಲವು ಸಹ ಸ್ಪರ್ಧಿಗಳ ಮುಖದ ಎಕ್ಸ್​ಪ್ರೇಶನ್​​ ಕೊಂಚ ವಿಭಿನ್ನವಾಗಿದೆ. ಸಂಗೀತಾ ಹಾಗೂ ಡ್ರೋನ್ ಪ್ರತಾಪ್‌ ಎದ್ದು ನಿಂತು ಕಾರ್ತಿಕ್‌ಗೆ ಚಪ್ಪಾಳೆ ತಟ್ಟಿದರು. ಕಾರ್ತಿಕ್​ ಕೂಡಾ ಈ ವೇಳೆ ಭಾವುಕರಾಗಿ ಎಲ್ಲೋ ಒಂದು ಕಡೆ 8 ವಾರದಿಂದ ಅನಿಸುತ್ತಿತ್ತು.. ಇದಕ್ಕಾಗಿ ಕೊರಗುತ್ತಿದ್ದೆ. ಯಾಕೆ ಬರ್ತಿಲ್ಲ? ಎಲ್ಲಾದರೂ ಮಿಸ್‌ ಆಗ್ತಿದ್ಯಾ ಅಂತ.. ಇದು ನನಗೆ ತುಂಬಾ ಮುಖ್ಯ ಸರ್‌ ಎಂದಿದ್ದಾರೆ.

ಆದರೆ, ಕಾರ್ತಿಕ್​​ಗೆ ಕಿಚ್ಚನ ಚಪ್ಪಾಳೆ ಸಿಗುತ್ತಿದ್ದಂತೆ ವಿನಯ್​ ಮುಖದ ಎಕ್ಸಪ್ರೇಶನ್​​ ಬದಲಾಗಿದೆ. ಏನಪ್ಪಾ ಹೀಗೆ ಆಗೋಯ್ತು...ಚ್ಯಾ...ಬಿಗ್​ಬಾಸ್​​ ಬೇರೆಯಾರು ಕಾಣಿಸಲೇ ಇಲ್ವಾ ಕಾರ್ತಿಕ್​​ಗೆ ಕಿಚ್ಚನ ಚಪ್ಪಾಳೆ ಕೊಟ್ಟರಾ? ಎನ್ನುವ ಹಾಗೆ ವಿನಯ್​ ಮುಖದ ಭಾವನೆ ಬದಲಾಗಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ.

ಬಿಗ್​ಬಾಸ್​​ ಯಾವುದೇ ಗೇಮ್​​ ನೀಡಿದ್ರು ವಿನಯ್ ಮೊದಲ ಟಾರ್ಗೆಟ್​​​​ ಕಾರ್ತಿಕ್​​ ಆಗಿರುತ್ತಾರೆ. ಕಿಚ್ಚನ ಚಪ್ಪಾಳೆ ಕೂಡಾ ಸರಿಯಾದ ವ್ಯಕ್ತಿಗೆ ಕೊಟ್ಟಿದ್ದೀರಾ ಬಿಗ್​ಬಾಸ್​​... ವಿನಯ್​​​ ಮುಖ ನಮಗೆ ನೋಡೋಕೆ ಆಗ್ತಿಲ್ಲ..ಯಾಕೆ... ಯಾಕೆ ಬಿಗ್​ಬಾಸ್​ ಹೀಗೆ ಮಾಡಿದ್ರಿ ವಿನಯ್​ ಮೂಖ ನೋಡಿ ಪಾಪ ಎಂದೆಲ್ಲ ಬಿಗ್​ಬಾಸ್ ಅಭಿಮಾನಿಗಳು ಸೋಶಿಯಲ್​​ ಮೀಡಿಯಾದಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.