ಜಿಲ್ಲೆ

ಬಿಗ್​ಬಾಸ್​ ವಿನ್ನರ್​​ ಹನುಮಂತು ಚಿಕ್ಕಪ್ಪ ಇನ್ನಿಲ್ಲ; ಖುಷಿಯಲ್ಲಿದ್ದ ಹಳ್ಳಿ ಹೈದನಿಗೆ ದುಃಖದ ಆಘಾತ | Bigg Boss Hanumantu

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ -11ರ ವಿಜೇತ ಹೈಳಿ ಹೈದ ಹನುಮಂತು(Bigg Boss Hanumantu) ಅವರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ವೈಲ್ಡ್​ ಕಾರ್ಡ್​ ಎಂಟ್ರಿಯಾದ ಸ್ಪರ್ಧಿಯೊಬ್ಬರು ಬಿಗ್​​ಬಾಸ್​ ಟ್ರೋಫಿ ಗೆದ್ದಿರುವುದು ಇದೇ ಮೊದಲು. 5 ಕೋಟಿ ವೋಟ್​​ ಪಡೆದು ಗೆದ್ದು ಬೀಗಿರುವ ಹನುಮಂತು ಬಿಗ್​​ಬಾಸ್​​ ಕನ್ನಡ ಕಾರ್ಯಕ್ರಮದಲ್ಲೇ ದಾಖಲೆ ಬರೆದಿದ್ದಾರೆ. ವೈಲ್ಡ್‌ ಕಾರ್ಡ್‌ ಸ್ಪರ್ಧಿಯೊಬ್ಬರು ಇಷ್ಟು ದೊಡ್ಡ ಸಂಖ್ಯೆಯ ವೋಟ್‌ ಪಡೆದು ವಿನ್ನರ್​ ಆಗಿರುವುದು ಬಿಗ್​ಬಾಸ್​ ಇತಿಹಾದಲ್ಲೇ ಇದು ಮೊದಲು. ಟ್ರೋಫಿ ಗೆದ್ದು ಸಂಭ್ರಮಿಸುತ್ತಿದ್ದ ಹನುಮಂತುಗೆ ಆ ಖುಷಿ ಹೆಚ್ಚು ಕಾಲ ಉಳಿದಿಲ್ಲ.

ಬಿಗ್​ಬಾಸ್​ ವಿನ್ನರ್​ ನಮ್ಮೂರ ಹುಡುಗ ಎಂದು ಸಂಭ್ರಮಿಸಲು ಇಡೀ ಊರಿನ ಮಂದಿ ಕಾಯುತ್ತಿರುತ್ತಾರೆ. ಆದರೆ ಇನ್ನೇನು ಮನೆಗೆ ಹೋಗಿ ಊರ ಜನರ ಮುಂದೆ ಸಂಭ್ರಮಿಸಬೇಕು ಎಂದುಕೊಂಡಿದ್ದ ಹನುಮಂತುನನ್ನು ದುಃಖದ ಸುದ್ದಿ ಬರಮಾಡಿಕೊಂಡಿದೆ. ಹನುಮಂತು ಅವರ ಚಿಕ್ಕಪ್ಪ ಆಗಿರುವ ದೇವಪ್ಪ ಎನ್ನುವರು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ದೇವಪ್ಪ ನಿಧನರಾಗಿದ್ದಾರೆ.

ಹೀಗಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದಲ್ಲಿ ನಡೆಯಬೇಕಿದ್ದ ಸಂಭ್ರಮಾಚರಣೆಯನ್ನು ಮುಂದೂಡಲಾಗಿದೆ.

ಹನುಮಂತು ಅವರನ್ನು ವಿಶ್‌ ಮಾಡಲು ಅವರ ಗ್ರಾಮಕ್ಕೆ ಅನೇಕರು ಬರುತ್ತಿದ್ದಾರೆ. ಆದರೆ ಅವರನ್ನೆಲ್ಲ ಮನೆಮಂದಿ ವಾಪಾಸ್‌ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ಮೂರು ದಿನದ ಬಳಿಕ ಸಲೆಬ್ರೆಷನ್‌ ಮಾಡಲು ನಿರ್ಧಾರಿಸಲಾಗಿದೆ ಎಂದು ತಿಳಿದು ಬಂದಿದೆ.