ಜಿಲ್ಲೆ

ಪೊಲೀಸ್​ ಠಾಣೆ ಮೆಟ್ಟಿಲೇರಿದ ಬಿಗ್​ಬಾಸ್​​ ಸ್ಪರ್ಧಿ ರಜತ್​ ಪತ್ನಿ ಅಕ್ಷಿತಾ; ಕಾರಣ ಏನು ಗೊತ್ತಾ? | Bigg Boss

ಬೆಂಗಳೂರು: ಬಿಗ್​​ಬಾಸ್​(Bigg Boss) ಕನ್ನಡ ಸೀಜನ್​ 11 ಕೊನೆಯ ವಾರಕ್ಕೆ ಕಾಲಿಟ್ಟಿದೆ. ಭಾನುವಾರ(ಜನವರಿ 19) ಕಿಚ್ಚನ ಪಂಚಾತಿಯ ಕೊನೆಯ ಎಪಿಸೋಡ್​​ ಕೂಡ ಟೆಲಿಕಾಸ್ಟ್​ ಆಗಿದ್ದಾಯ್ತು, ಫಿನಾಲೆ ವಾರಕ್ಕೆ ಕಾಲಿಟ್ಟ ಸ್ಪರ್ಧಿಗಳಿಗೆ ಅಭಿನಯ ಚಕ್ರವರ್ತಿ ವಿಶ್​ ಮಾಡಿದ್ದು ಆಯ್ತು. ಅಂದ್ಹಾಗೆ ಉಗ್ರಂ ಮಂಜು, ಹನುಮಂತ, ತ್ರಿವಿಕ್ರಮ್​, ಮೋಕ್ಷಿತಾ ಪೈ, ರಜತ್​, ಭವ್ಯ ಗೌಡ ಬಿಗ್​ಬಾಸ್​​ ಸೀಸನ್​ 11ರ ಫಿನಾಲೆ ಅಭ್ಯರ್ಥಿಗಳಾಗಿರುವುದು ಗೊತ್ತೆ ಇದೆ.

ವೈಲ್ಡ್​ ಕಾರ್ಡ್​​​ ಎಂಟ್ರಿ ಮೂಲಕ ಎಂಟ್ರಿಕೊಟ್ಟ ರಜತ್​​​​ ಪ್ರಾರಂಭದಲ್ಲಿ ಆಟಗಳ ಮಧ್ಯೆ ಬಾಯಿಗೆ ಬಂದಂತೆ ಮಾತನಾಡಿ ಪ್ರೇಕ್ಷಕರ ಕೋಪಕ್ಕೆ ಕಾರಣವಾಗುತ್ತಿದ್ದರು. ದಿನೇ ದಿನೆ ಕಳೆಯುತ್ತಿದ್ದಂತೆ ರಜತ್‌ ಅವರ ಕಾಮಿಡಿ ಕೆಲವು ಸ್ಪರ್ಧಿಗಳ ಬಗ್ಗೆ ರಜತ್‌ ತೋರಿಸುವ ಕಾಳಜಿ, ಸರಿಯಾದ ಸಮಯದಲ್ಲಿ ವಾದ, ಟಾಸ್ಕ್‌ಗಳಲ್ಲಿಯೂ ಉತ್ತಮವಾಗಿ ಆಡುತ್ತಿರುವುದರಿಂದ ಈಗ ಆಡಿಯನ್ಸ್​​ಗೆ ಬಹುತೇಕ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಫಿನಾಲೆ ವಾರಕ್ಕೆ ಕಾಲಿಟ್ಟಿರುವ ಬಿಗ್​ಬಾಸ್​​ ಸ್ಪರ್ಧಿ ರಜತ್​​ಗೆ ಹೊಸ ತಲೆನೋವು ಎದುರಾಗಿದೆ. ಕಪ್ ಗೆದ್ದು ವಿಜೇತನಾಗಲು ಹೊರಟಿರುವ ರಜತ್​ ಅವರಿಗೆ ಟ್ರೋಲರ್ಸ್​ ತಲೆ ನೋವಾಗಿ ಕಾಡುತ್ತಿದ್ದಾರೆ. ರಜತ್ ಹಾಗೂ ಅವರ ಮಾಜಿ ಗೆಳತಿಯ ಫೋಟೋ ಟ್ರೋಲ್ ಪೇಜ್‌ಗಳ ಬಾಯಿಗೆ ಆಹಾರವಾಗಿದ್ದು, ಇಬ್ಬರು ಜೊತೆಗೆ ಇರುವ ಫೋಟೋಗಳನ್ನು ವೈರಲ್‌ ಮಾಡಲಾಗುತ್ತಿದೆ.

ರಜತ್ ಹಾಗೂ ಅವರ ಮಾಜಿ ಗೆಳತಿಯ ಫೋಟೋ ಶೇರ್ ಮಾಡಿ ತೊಂದರೆ ಮಾಡಿದ್ದಾರೆ. ಮಾಜಿ ಗೆಳತಿ- ರಜತ್ ಇರುವ ಫೋಟೋ ಅಪ್​ಲೋಡ್ ಮಾಡಿ ಟ್ರೋಲ್ ಮಾಡುತ್ತಿದ್ದರು. ಇದಕ್ಕೆ ರಜತ್ ಅವರ ಪತ್ನಿ ಅಕ್ಷಿತಾ ಅವರು ಫೋಟೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಫೋಟೋ ಡಿಲೀಟ್ ಮಾಡುವಂತೆ ಮೆಸೇಜ್‌ ಮೂಲಕ ರಜತ್​ ಪತ್ನಿ ಅಕ್ಷಿತಾ ಮನವಿ ಮಾಡಿದ್ದಾರೆ. ಅದಕ್ಕೆ ಟ್ರೋಲರ್​ ಒಬ್ಬರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಟ್ರೋಲರ್​ ಒಬ್ಬ ಕಳುಹಿಸಿದ ಯುಪಿಐ ಐಡಿಗೆ ರಜತ್ ಪತ್ನಿ, 6,500 ರೂಪಾಯಿಗಳನ್ನು ಕುಳುಹಿಸಿದ್ದಾರೆ. ಈ ಹಣ ಕಳುಹಿಸಿದ ಬಳಿಕ ಮತ್ತೆ ಬೇರೆ ಟ್ರೋಲರ್​ ಪೇಜ್​ಗಳಲ್ಲಿ ಫೋಟೋ ಅಪ್​ಲೋಡ್ ಮಾಡಿ ದುಡ್ಡು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದರಿಂದ ಬೇಸತ್ತ ರಜತ್​​ ಪತ್ನಿ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ದೂರು ನೀಡಿದ್ದಾರೆ. ಎಫ್​ಐಆರ್​ ದಾಖಲಾಗುತ್ತಿದ್ದಂತೆ ಫೋಟೋ ಡಿಲೀಟ್ ಮಾಡಿರುವ ಟ್ರೋಲ್ ಪೇಜ್‌ಗಳು ಖಾತೆಗಳನ್ನು ಕೂಡ ಡಿಲೀಟ್‌ ಮಾಡಿದ್ದಾರೆ. ಸದ್ಯ ಬ್ಲ್ಯಾಕ್‌ ಮೇಲ್‌ ಮಾಡಿ ಹಣ ಪಡೆದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.