ಜಿಲ್ಲೆ

ಬೃಹತ್​ ಹಲಗೆ ಹಬ್ಬ ಇಂದು

ಗೋಕಾಕ: ಹಿಂದು ಜಾಗರಣ ವೇದಿಕೆ ಗೋಕಾಕ ಟಕದಿಂದ ಪ್ರತಿ ವರ್ಷದಂತೆ ಈ ವರ್ಷವು ನಗರದಲ್ಲಿ ಬಹತ್​ ಹಲಗೆ ಹಬ್ಬವನ್ನು ಮಾ.11ರಂದು ಆಯೋಜಿಸಲಾಗಿದೆ. ಅಂದು ಸಂಜೆ 4.30ಕ್ಕೆ ನಗರದ ಕೊಳವಿ ಹಣಮಂತ ದೇವರ ದೇವಸ್ಥಾನದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವತ್ತದ ವರೆಗೆ ಹಲಗೆ ಬಾರಿಸುವ ಮೂಲಕ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಠಾಧೀಶರು, ಆರ್​ಎಸ್​ಎಸ್​ ಪ್ರಮುಖರು, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಭಾಗವಹಿಸಲಿದ್ದು, ಹಿಂದು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಂಕುಶ ರೇಣಕೆ ಹಾಗೂ ಸಾಯಿ ಕೋಸಂದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಗಳಿಹಾಳ: ಎಲ್ಲರೂ ಪರಸ್ಪರ ಪ್ರೀತಿ&ವಿಶ್ವಾಸದ ತಳಹದಿಯ ಮೇಲೆ ಹೋಳಿ ಹಬ್ಬ ಆಚರಿಸಬೇಕು ಎಂದು ಎಎಸ್​ಐ ಬಿ.ಕೆ.ರಂಗಣ್ಣವರ ಹೇಳಿದರು. ಗ್ರಾಮದ ಗ್ರಾಪಂ ಸಭಾಂಗಣದಲ್ಲಿ ಹೋಳಿ ಹಬ್ಬದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾದಂತೆ ಶಾಂತಿ, ಸುವ್ಯವಸ್ಥೆಯಿಂದ ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಟನೆಗಳಿಗೆ ಆಸ್ಪದ ನೀಡಬಾರದು ಎಂದು ತಿಳಿಸಿದರು. ಗ್ರಾಪಂ ಅಧ್ಯೆ ರುಕ್ಮವ್ವ ಕೊಪ್ಪದ, ಉಪಾಧ್ಯೆ ಚನ್ನವ್ವ ಕಡಕೋಳ, ಸದಸ್ಯರಾದ ರಾಮನಗೌಡ ಗಂಗರೆಡ್ಡಿ, ರಾಮಸಿದ್ದಪ್ಪ ಧರ್ಮಟ್ಟಿ, ಪಾಂಡಪ್ಪ ಬೀರಕ್ಕನವರ, ನಾಗಪ್ಪ ಪುಂಜಿ, ಪದ್ಮಾವತಿ ಮುರಗಟ್ಟಿ, ಮಾನಿಂಗವ್ವ ಮಾಯನ್ನಿ, ಶೇಕವ್ವ ದೇಸಾಯಿ, ಪಿಡಿಒ ಅಮಿತ್​ ನಾಯಕ, ಕಾರ್ಯದರ್ಶಿ ಕರೆಪ್ಪ ದೊಡ್ಡನ್ನವರ, ಪೊಲೀಸ್​ ಸಿಬ್ಬಂದಿ ವಿಠ್ಠಲ ಬಾಂಗಿ ಇತರರಿದ್ದರು.