filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ರೈತ ಸಂಘಟನೆ ಹುಟ್ಟುಹಾಕಿದ ಹೋರಾಟಗಾರ

ಹೊನ್ನಾಳಿ: ರಾಜ್ಯದ ಉದ್ದಗಲಕ್ಕೂ ರೈತ ಸಂಘಟನೆಯನ್ನು ಸಂಘಟಿಸಲು ಮತ್ತು ಅವರ ಸಮುದಾಯದ ಹಿತರಕ್ಷಣೆಗಾಗಿ ದಿ. ಎಚ್.ಎಸ್. ರುದ್ರಪ್ಪ ನಿರಂತರ ಶ್ರಮಿಸಿದ್ದಾರೆ ಎಂದು ರೈತ ಮುಖಂಡ ಬಿದರಗಡ್ಡೆ ಭರಮಪ್ಪಗೌಡ ಹೇಳಿದರು.

ಪಟ್ಟಣದ ನ್ಯಾಮತಿ- ಶಿಕಾರಿಪುರ ರಸ್ತೆಯ ಅಪ್ಪರ್​ತುಂಗ ಸರ್ಕಲ್ ಬಳಿ ಶನಿವಾರ ಹೊಸಕೊಪ್ಪ ಗ್ರಾಮದ ರೈತಮುಖಂಡ ಎಚ್.ಎಸ್. ರುದ್ರಪ್ಪನವರ 34 ನೇ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಲ್ಕೈದು ದಶಕಗಳ ಹಿಂದೆ ರೈತ ಸಂಘಟನೆಗಳು ಇಲ್ಲದೇ ಇದ್ದ ಸಂದರ್ಭದಲ್ಲಿ ರುದ್ರಪ್ಪನವರು ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿದರು. ರೈತ ಸಂಘಟನೆಗಳಿಂದ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಜವಾಬ್ದಾರಿಯ ಕೆಲಸ ಮಾಡಿದ್ದಾರೆ ಎಂದರು.

ಡಾ.ಎಚ್.ಎಸ್. ರುದ್ರೇಶ್ ಮಾತನಾಡಿ, ಮೈಸೂರು ಸಂಸ್ಥಾನದ ಅವಧಿಯಲ್ಲಿ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿಯಾಗಿದ್ದಾಗ ರುದ್ರಪ್ಪನವರು ಅಂದಿನ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ, ಕೃಷಿ ಸೇರಿ ಹಲವಾರು ಖಾತೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಹೆಗ್ಗಳಿಕೆ ಇದೆ ಎಂದು ಹೇಳಿದರು.

ನಂತರದ ಅವಧಿಯಲ್ಲಿ ರೈತರಿಗೋಸ್ಕರ ಸೇವೆ ಮಾಡಬೇಕು ಎಂಬ ಸದುದ್ದೇಶದಿಂದ ರಾಜ್ಯ ರೈತ ಸಂಘ ಹುಟ್ಟು ಹಾಕುವಲ್ಲಿ ನಿರಂತರ ಶ್ರಮಿಸಿದರು. ರೈತ ಸಂಘಟನೆಗಳು ರುದ್ರಪ್ಪನವರ ಆದರ್ಶ ಮೌಲ್ಯಗಳನ್ನು ಪಾಲಿಸಿದರೆ ಯಶಸ್ಸು ಖಂಡಿತ ಎಂದರು.

ನ್ಯಾಮತಿ ತಾಲೂಕಿನ ರೈತ ಸಂಘದ ಅಧ್ಯಕ್ಷ ದೊಡ್ಡೇರಿ ಬಸವರಾಜಪ್ಪ, ಹೊನ್ನಾಳಿ ರೈತ ಸಂಘದ ಮುಖಂಡ ಹಿರೇಮಠದ ಬಸವರಾಜಪ್ಪ ಮಾತನಾಡಿದರು.

ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಂದ್ರಗೌಡ, ರೈತ ಮುಖಂಡರಾದ ಎಸ್.ಎನ್. ಗೋಪಾಲನಾಯ್ಕ, ಗೋರಟ್ಟಿಮಂಜಪ್ಪ, ಶಿವಕುಮಾರ ಕುಂದೂರು, ಷಣ್ಮುಖಪ್ಪ, ಹಿರೇಮಠದ ರಮೇಶ್, ಚನ್ನಪ್ಪ, ಆನಂದಪ್ಪ, ನೀಲಪ್ಪ, ಚನ್ನೇಶ್ ಸೇರಿ ಅನೇಕ ರೈತ ಮುಖಂಡರು ಇದ್ದರು.