ಹುಲಸೂರು ತಾಲೂಕಿನ ಗೋರ್ಟಾ (ಬಿ)ದಲ್ಲಿ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಪ್ರಭುದೇವ ಸ್ವಾಮೀಜಿ, ತಹಸೀಲ್ದಾರ್​ ಶಿವಾನಂದ ಮೇತ್ರೆ, ಡಾ.ಪ್ರಿಯಾ ಎಲಿ, ವಿಜಯಲಕ್ಷಿ$್ಮ ಕೌಟಗೆ, ಯೋಗೇಶ ಹಿರೇಮಠ, ಶ್ಯಾಮಲಾ ಅಶೋಕ, ಕರಬಸಪ್ಪ ಅಕ್ಕಣ್ಣ ಇತರರಿದ್ದರು. 
ಬೀದರ್

ಕಲ್ಯಾಣ ಶರಣರು ನಡೆದಾಡಿದ ಪಾವನ ಭೂಮಿ

ಹುಲಸೂರು: ಹನ್ನರಡನೇ ಶತಮಾನದಲ್ಲಿ ಶರಣರು ನಡೆದಾಡಿರುವ ಕಲ್ಯಾಣ ಪಾವನ ಭೂಮಿಯಾಗಿದೆ ಎಂದು ತಹಸೀಲ್ದಾರ್​ ಶಿವಾನಂದ ಮೇತ್ರೆ ಹೇಳಿದರು.

ತಾಲೂಕಿನ ಗೋರ್ಟಾ (ಬಿ) ಗ್ರಾಮದ ಲಿಂಗಾಯತ ಮಹಾ ಮಠದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಕಲ್ಯಾಣ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣ ಆಗುತ್ತಿರುವುದು ಸಂತಸ ತಂದಿದೆ. ನೋಡುಗರ ಗಮನ ಸೆಳೆಯುವ ಭವ್ಯ ಅನುಭವ ಮಂಟಪ ಈಗಾಗಲೇ ಸಿದ್ಧಗೊಳ್ಳುತ್ತಿದ್ದು, ಅದಷ್ಟು ಬೇಗನೆ ಉದ್ಘಾಟನೆ ಆಗಲಿದೆ ಎಂದರು.

ಮಠದ ಪೀಠಾಧಿಪತಿ ಶ್ರೀ ಪ್ರಭುದೇವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸೂತ್ರವಿಡಿದು, ಸರ್ವರು ದುಡಿದು ಉಣ್ಣಬೇಕು ದುಡಿಯದೇ ಉಣ್ಣುವ ಹಕ್ಕು ಯಾರಿಗೂ ಇಲ್ಲ ಎಂದಿದ್ದರಿಂದ ಕಲ್ಯಾಣದಲ್ಲಿ ನೀಡುವವರು ಉಂಟು ಬೇಡುವವರಿಲ್ಲದ ಸಮೃದ್ಧಿ ರಾಜ್ಯವಾಗಿತ್ತು. ಇಂದು ಆ ಆದರ್ಶ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಾಹಿತಿ ವಿಜಯಲಕ್ಷಿ$್ಮ ಕೌಟಗೆ ಮಾತನಾಡಿ, ಬಸವಣ್ಣನವರ ಸಮಾನತೆಯ ಕ್ರಾಂತಿ ಜಾತಿ, ವರ್ಣ, ವರ್ಗರಹಿತ, ಸಮಾಜ ನಿಮಾರ್ಣ ಮಾಡಿದರು ಎಂದು ಹೇಳಿದರು.

ಬೀದರ್​ನ ಡಾ.ಪ್ರಿಯಾ ಎಲಿ ಮಾತನಾಡಿದರು. ಹಾರಕೂಡ ಪಿಡಿಒ ಯೋಗೇಶ ಹಿರೇಮಠ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶ್ಯಾಮಲಾ ಅಶೋಕ ಎಲಿ ವಚನ ಗಾಯನಗಮನ ಸೆಳೆಯಿತು. ಕರಬಸಪ್ಪ ಅಕ್ಕಣ್ಣ, ಮಂದಾಕಿನಿ ಕಾದೇಪುರೆ , ಚಂದ್ರಮ್ಮ ಕಾದೇಪುರೆ, ಬಾಬುರಾವ ರಾಜೋಳೆ, ಸುಭಾಷ ಪತಂಗೆ, ಚಂದ್ರಕಾಂತ ಕಣಜೆ, ಶಿವರಾಜ ಕನಕಟ್ಟೆ, ಈಶ್ವರ ಕಣಜೆ ಇದ್ದರು. ಸೋಮನಾಥ ರಾಜೇಶ್ವರೆ ಸ್ವಾಗತಿಸಿದರು. ಸಿದ್ಧಾರೂಢ ಎರನಾಳೆ ನಿರೂಪಣೆ ಮಾಡಿದರು. ರಾಜ್ಯ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಸ್ವಪ್ನ ಸಂತೋಷ ಪತಂಗೆ ದಂಪತಿಗೆ ಸನ್ಮಾನಿಸಲಾಯಿತು.