ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಶ್ರೀ ಚಂದ್ರಗುಂಡ ಶಿವಾಚಾರ್ಯರನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸತ್ಕರಿಸಿ ಗೌರವಿಸಿದರು. ಶ್ರೀ ನಿಜಲಿಂಗ ಶಿವಾಚಾರ್ಯರು, ಮಲ್ಲಿನಾಥ ಹಿರೇಮಠ, ಮಧುರಾಯ ಕೆರಗೋಟೆ, ಸಿದ್ದಪ್ಪ ತರನಳ್ಳಿ, ದಗಡು ಬಿರಾದಾರ ಇತರರಿದ್ದರು. 
ಬೀದರ್

ನಾಡಿನ ಮಠಮನ್ಯಗಳಿಂದ ಜ್ಞಾನದ ಬೆಳಕು

ಬಸವಕಲ್ಯಾಣ: ನಾಡಿನ ಮಠಮಾನ್ಯಗಳು ಕೇವಲ ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ಸೀಮಿತವಾಗಿರದೆ, ಜ್ಞಾನದ ಬೆಳಕು ನೀಡುವ ವಿದ್ಯಾ ಕೇಂದ್ರಗಳಾಗಿವೆ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ನುಡಿದರು.

ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಜಗತ್ತಿನಲ್ಲಿ ಪ್ರೀತಿಗಿಂತ ಶ್ರೇಷ್ಠವಾದದ್ದು ಇನ್ನೊಂದಿಲ್ಲ. ಪ್ರೀತಿ, ಪ್ರೇಮ, ದಯೆ, ಕರುಣೆ, ದಾಸೋಹದ ಸತ್ಪರಂಪರೆಯೊಂದಿಗೆ ಈ ನಾಡಿನಲ್ಲಿ ಹಾರಕೂಡ ಮಠ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಸಾಹಿತ್ಯ, ಸಾಂಸತಿಕ ಕ್ಷೇತ್ರಕ್ಕೆ ಡಾ.ಚನ್ನವಿರ ಶಿವಾಚಾರ್ಯರ ಕೊಡುಗೆ ಅನನ್ಯವಾಗಿದ್ದು, ತಮಗೂ ಹಾರಕೂಡ ಮಠಕ್ಕೂ ಕರುಳು ಸಂಬಂಧವಿದ್ದಂತಿದೆ ಎಂದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ ಚಂದ್ರಗುಂಡ ಶಿವಾಚಾರ್ಯರು ಸನ್ಮಾನ ಸ್ವೀಕರಿಸಿ ಮಾತನಾಡಿ, ಹಾರಕೂಡದ ಲಿಂ.ಪೂಜ್ಯ ಚನ್ನಬಸವ ಶಿವಯೋಗಿಗಳು ಬರನಾಡನ್ನು ಸಿರಿನಾಡನ್ನಾಗಿ ಪರಿವರ್ತಿಸಿದ ಮಹಾನ್​ ಸಂತ ಶ್ರೇಷ್ಠರು, ಇಂತಹ ಶ್ರೀಮಠದಿಂದ ಗೌರವ ಪಡೆದಿರುವುದು ನಮ್ಮ ಪುಣ್ಯ ಎಂದು ಧನ್ಯತಾ ಭಾವ ವ್ಯಕ್ತಪಡಿಸಿದರು.

ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶ್ರೀ ನಿಜಲಿಂಗ ಶಿವಾಚಾರ್ಯರು ಅಷ್ಟಗಿ, ಮಲ್ಲಿನಾಥ ಹಿರೇಮಠ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಮಧುರಾಯ ಕೆರಗೋಟೆ, ಸಿದ್ದಪ್ಪ ತರನಳ್ಳಿ, ಶರಣಬಸಪ್ಪ ಹಾಗರ್ಗಿ, ದಗಡು ಬಿರಾದರ, ಓಂಕಾರ್​ ದರ್ಜಿ ಇತರರಿದ್ದರು. ಕಲಾವಿದ ನವಲಿಂಗ ಪಾಟೀಲ ಸ್ವಾಗತಿಸಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ಹಾಡಿದರು.

ಹಾರಕೂಡ ಮಠ ಸಮನ್ವಯ ಸಿದ್ಧಾಂತದ ಮಠವಾಗಿದೆ. ಹಾರಕೂಡ ಶ್ರೀಗಳು ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ. ಎಲ್ಲರನ್ನು ಪ್ರೀತಿಸಿ ಗೌರವಿಸುತ್ತಾರೆ. ಸಾಹಿತಿಗಳನ್ನು ಗೌರವಿಸುತ್ತಾರೆ. ಅವರ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಪ್ರೋತ್ಸಾಹಿಸುತ್ತಾರೆ. ಈ ಮಠದಿಂದ ನಡೆಯುವ ಸಮಾಜೋಧಾರ್ಮಿಕ ಕಾರ್ಯ, ಸಾಹಿತ್ಯ ಸಂಸತಿ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಮಾದರಿಯಾಗಿದೆ.
> ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಅಧ್ಯಕ್ಷರು, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೆಂಗಳೂರು