ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮವನ್ನು ಶ್ರೀ ಡಾ. ಚನ್ನವಿರ ಶಿವಾಚಾರ್ಯರು ಉದ್ಘಾಟಿದರು. ಪ್ರವಿಣ ಪತ್ತಾರ, ಶ್ರೀಶೈಲ ಪಾಟೀಲ, ಡಾ.ರಾಜಶೆಖರ ಮದರಿ, ಮಲ್ಲಿನಾಥ ಹಿರೇಮಠ, ಆಕಾಶ ರಡ್ಡಿ, ಸುನೀಲ ಹಾಗರಗಾ, ಪ್ರವಿಣರಡ್ಡಿ ಸಸ್ತಾಪುರ, ವೀರಣ್ಣ ನೆಲ್ಲೂರ, ಅಂಬಾದಾಸ ಪಲಂಗೆ ಇತರರಿದ್ದರು.
- ಶ್ರೀ ಡಾ.ಚನ್ನವಿರ ಶಿವಾಚಾರ್ಯ ಅಭಿಮತ
- ಹಾರಕೂಡದಲ್ಲಿ ಗುರುವಂದನೆ ಕಾರ್ಯಕ್ರಮ
ಬಸವಕಲ್ಯಾಣ: ಮನಸ್ಸಿಗೆ ಅಗಾಧವಾದ ಶಕ್ತಿ ಇದೆ. ಇದನ್ನು ಸಮಯೋಚಿತವಾಗಿ ಮತ್ತು ರಚನಾತ್ಮಕವಾಗಿ ಬಳಸಿಕೊಳ್ಳುವ ಕೌಶಲವಿದ್ದರೆ ಮಾತ್ರ ತಾನು ಇಷ್ಟಪಡುವ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲು ಸಾದ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದಲ್ಲಿ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 2016ನೇ ಸಾಲಿನ ವಿದ್ಯಾರ್ಥಿಗಳಿಂದ ಸೋಮವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ತನ್ನ ಮನಸ್ಸಿನೊಳಗೆ ದುರಾಲೋಚನೆಗಳು ಪ್ರವೇಶಿಸದಂತೆ ಜಾಗೃತ ಕಾವಲುಗಾರನಾರುತ್ತಾನೊ ಅಂತಹ ವ್ಯಕ್ತಿ ಜೀವನದಲ್ಲಿ ಶ್ರೇಷ್ಠ ಸಾಧಕನಾಗಿ ಹೊರಹೊಮ್ಮುತ್ತಾನೆ. ಮನಸ್ಸಿನ ದಾಸನಾಗದೆ ಗುರುವಿನ ಮಾರ್ಗದರ್ಶನ ಯೋಗ್ಯ ಶಿಕ್ಷಣ ಹಾಗೂ ಸತತ ಪ್ರಯತ್ನ ಶೀಲನಾದವರ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳುತ್ತದೆ ಎಂದರು.
ಪುಂಡಲೀಕ ಕಮಲಾಪುರ, ಡಾ.ರಾಜಶೆಖರ ಮದರಿ, ಮಲ್ಲಿನಾಥ ಹಿರೇಮಠ, ಪ್ರವಿಣ ಪತ್ತಾರ, ಶ್ರೀಶೈಲ ಪಾಟೀಲ, ಆಕಾಶ ರಡ್ಡಿ, ಸುನೀಲ ಹಾಗರಗಾ ಇತರರಿದ್ದರು. ಪ್ರವಿಣ ರಡ್ಡಿ ಸಸ್ತಾಪುರ ಸ್ವಾಗತಿಸಿದರು. ವೀರಣ್ಣ ನೆಲ್ಲೂರ ವಂದಿಸಿದರು. ಅಂಬಾದಾಸ ಪಲಂಗೆ ನಿರೂಪಣೆ ಮಾಡಿದರು. ಬಂದೆನವಾಜ್ ಗವಾಯಿ ಪ್ರಾರ್ಥನೆ ಗೀತೆ ಹಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ ಕಲಿತ 2016ನೇ ಸಾಲಿನ ವಿದ್ಯಾರ್ಥಿಗಳು ಹಾರಕೂಡ ಶ್ರೀಗಳಿಗೆ 1032ನೇ ತುಲಾಭಾರ ಮಾಡಿ ಆಶೀರ್ವಾದ ಪಡೆದರು.