ಔರಾದ್​ ಬಸ್​ನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ನಿರ್ವಾಹಕನನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಸೋಮವಾರ ಎಬಿವಿಪಿ ಕಾರ್ಯಕರ್ತರು ಪಟ್ಟಣದ ಬಸ್​ ನಿಲ್ದಾಣದ ಎದುರು ಬೃಹತ್​ ಪ್ರತಿಭಟನೆ ನಡೆಸಿ ಡಿಟಿಒ ಶಾರದಾದೇವಿ ಅವರಿಗೆ ಮನವಿ ಸಲ್ಲಿಸಿದರು. ಘಟಕ ವ್ಯವಸ್ಥಾಪಕ ಮಲ್ಲಿಕಾರ್ಜುನ, ಎಬಿವಿಪಿ ವಿಭಾಗ ಸಂಚಾಲಕ ಪವಾನ ಕುಂಬಾರ, ನಾಗರಾಜ ಸುಲ್ತಾನಪುರೆ, ಸುರೇಶ ಮರ್ತಳೆ, ಅಶೋಕ ಶೆಂಬೆಳ್ಳಿ, ಹಾವಪ್ಪ ದ್ಯಾಡೆ, ಅಂಬಾದಾಸ ನಳಗೆ, ಅಭಿಷೇಕ ಮಾನೆ, ಅಭಿಷೇಕ ಪಾಟೀಲ್​, ಕಲ್ಲೇಶ ಬಿರಾದಾರ್​, ಅಂಬಿಕಾ, ಭಾಗ್ಯಲತಾ, ಮಾರುತಿ ಉದಗೀರೆ, ಪವಾನ ಬುಕ್ಕಾ, ಜಗದೀಶ ಇತರರಿದ್ದರು. 
ಬೀದರ್

ಹಲ್ಲೆಗೈದ ನಿರ್ವಾಹಕನನ್ನು ಅಮಾನತು ಮಾಡಿ

ಔರಾದ್​: ಬಸ್​ನಲ್ಲಿ ಬೀದರ್​ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿ ಅಭಿಷೇಕ ಮೇಲೆ ಮೇಲೆ ಹಲ್ಲೆ ನಡೆಸಿ ನಿರ್ವಾಹಕ ಧೂಳಪ್ಪ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಬುಧವಾರ ಪಟ್ಟಣದ ಬಸ್​ ನಿಲ್ದಾಣದ ಎದುರು ಬೃಹತ್​ ಪ್ರತಿಭಟನೆ ನಡೆಸಿದರು.

ಎಬಿವಿಪಿ ಕಾರ್ಯಕರ್ತರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಿಲ್ದಾಣದ ಎದುರು ಜಮಾಯಿಸಿ ನಿರ್ವಾಹಕ ಧೂಳಪ್ಪ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ಬಸ್​ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರಿಂದ ಸಾರಿಗೆ ಸಂಚಾರಕ್ಕೆ ಅಡಚಣೆ ಉಂಟಾಯಿತು.

ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ ಘಟನೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮಕೈಗೊಳ್ಳಬೇಕು. ನಿರ್ವಾಹಕನನ್ನು ಅಮಾನತು ಮಾಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಘಟಕ ವ್ಯವಸ್ಥಾಪಕ ಮಲ್ಲಿಕಾರ್ಜುನ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಆದರೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಮಾನತು ಕುರಿತು ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ಸಾರಿಗೆ ಇಲಾಖೆಯ ಡಿಟಿಒ ಶಾರದಾದೇವಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ನಿರ್ವಾಹಕ ಧೂಳಪ್ಪ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಬಳಿಕ ಪ್ರತಿಭಟನೆ ಅಂತ್ಯಗೊಳಿಸಿದರು.

ಎಬಿವಿಪಿ ವಿಭಾಗ ಸಂಚಾಲಕ ಪವಾನ ಕುಂಬಾರ, ಜಿಲ್ಲಾ ಸಂಚಾಲಕ ನಾಗರಾಜ ಸುಲ್ತಾನಪುರೆ, ಸುರೇಶ ಮರ್ತಳೆ, ಹಿರಿಯ ಕಾರ್ಯಕರ್ತರಾದ ಅಶೋಕ ಶೆಂಬೆಳ್ಳಿ, ಹಾವಪ್ಪ ದ್ಯಾಡೆ, ಅಂಬಾದಾಸ ನಳಗೆ, ಅಭಿಷೇಕ ಮಾನೆ, ಅಭಿಷೇಕ ಪಾಟೀಲ್​, ಕಲ್ಲೇಶ ಬಿರಾದಾರ್​, ಅಂಬಿಕಾ, ಭಾಗ್ಯಲತಾ, ಮಾರುತಿ ಉದಗೀರೆ, ಪವಾನ ಬುಕ್ಕಾ, ಜಗದೀಶ ಸೇರಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.